Districts

ಬಿಡದಿ ಪುರಸಭೆ ಫಲಿತಾಂಶ ಕುರಿತು ಹೆಚ್ಡಿಕೆ ಸಂತಸ

ರಾಮನಗರ: ಜಿಲ್ಲೆಯ ಬಿಡದಿಯಲ್ಲಿ ಪುರಸಭೆ ಚುನಾವಣೆಯ ಫಲಿತಾಂಶಹೊರಗೆ ಬಿದ್ದಿದೆ. ಅದರಲ್ಲಿ ಜೆಡಿಎಸ್‌ ವಿಜಯ ಪತಾಕೆ ಹಾರಿಸಿದೆ. ೨೩ ವಾರ್ಡ್‌ ಗಳ ಪೈಕಿ ೧೪ ಸ್ಥಾನಗಳು ಜೆಡಿಸ್‌, ೯ ಕಾಂಗ್ರೆಸ್‌ ಪಲಾಗಿದೆ.
ಈ ಹಿನ್ನೆಲೆಯಲ್ಲಿ ಚುನಾವಣೆ ಫಲಿತಾಂಶ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ೧೮-೨೦ ಸ್ಥಾನಗಳಲ್ಲಿ ಜೆಡಿಎಸ್‌ಗೆ ಗೆಲುವು ಆಗುತ್ತದೆ ಅಂದುಕೊಂಡಿದ್ದೆ. ಈಗ ೧೪ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಡದಿಯ ಮತದಾರರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.
ಇನ್ನು ನನಗೆ ಮುಂದಿನ ಚುನಾವಣೆಗೆ ಈಗ ಬಂದ ಫಲಿತಾಂಶ ಮಾನಸಿಕವಾಗಿ ಶಕ್ತಿ ತುಂಬಿದೆ. ಆದರೆ ಬಿಡದಿಯ ಮತದಾರರು ನನಗೆ ಆರ್ಶೀವಾದ ಮಾಡಿದ್ದಾರೆ ಎಂದರು.

Share Post