NationalPolitics

ಉತ್ತರಾಖಂಡ್​ನಲ್ಲಿ ಮೋದಿ ದರ್ಬಾರ್: 17,500 ಕೋಟಿ ಯೋಜನೆಗಳಿಗೆ ಅಡಿಗಲ್ಲು

ಉತ್ತರಾಖಂಡ್: ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಇಂದು ಸಾವಿರಾರು ಕೋಟಿಯ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರಾಖಂಡ್​​ಗೆ ಇಂದು ಭೇಟಿ ನೀಡಿಲಿದ್ದಾರೆ. ಬರೋಬ್ಬರಿ 17,500 ಕೋಟಿ ರೂಪಾಯಿ ಮೌಲ್ಯದ 23 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಸಚಿವಾಲಯ ಮಾಹಿತಿ ನೀಡಿದೆ. ಶಂಕುಸ್ಥಾಪನೆ ಜೊತೆಗೆ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ್ನು ಉದ್ಘಾಟನೆ ಮಾಡ್ತಾರೆ ಎಂಬ ಮಾಹಿತಿಯಿದೆ. ನೀರಾವರಿ, ರಸ್ತೆ, ವಸತಿ, ಆರೋಗ್ಯ ಮೂಲಸೌಕರ್ಯ, ಉದ್ಯಮ, ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ಯೋಜನೆಗಳಿಗೆ ಚಾಲನೆ ನೀಡಲಿದ್ದು, ವಿಸ್ತರಣೆಗೊಂಡ ರಸ್ತೆಗಳು, ಪಿಥೋರ್​ಗಢ್​​ನಲ್ಲಿ ಜಲವಿದ್ಯುತ್​ ಯೋಜನೆ, ನೈನಿತಾಲ್​​ನಲ್ಲಿ ಒಳಚರಂಡಿ ವ್ಯವಸ್ಥೆ ಸೇರಿದಂತೆ 6 ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.

ಇದರ ಜೊತೆಗೆ ಮೋದಿಯವರು 5,750 ಕೋಟಿ ರೂಪಾಯಿ ವೆಚ್ಚದ ಲಖ್ವಾರ್​ ವಿವಿಧೋದ್ದೇಶ ಯೋಜನೆಗಳಿಗೆ ಕೂಡ ಚಾಲನೆ ನೀಡಲಿದ್ದಾರೆ. ಈ ಯೋಜನೆ ಮೊದಲ ಬಾರಿಗೆ 1976ರಲ್ಲಿ ಜಾರಿಯಾಗಿತ್ತು, ಆದ್ರೆ ಅದರ ಅನುಷ್ಠಾನಕ್ಕೆ ಮಾತ್ರ ಬರದೆ ನಿಂತುಹೋಗಿತ್ತು. ಈಗ ಈ ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಈ ಲಖ್ವಾರ್​ ವಿವಿಧೋದ್ದೇಶ ಯೋಜನೆ ಸುಮಾರು 34 ಸಾವಿರ ಹೆಕ್ಟೇರ್​ ಹೆಚ್ಚುವರಿ ಭೂಮಿಗೆ ನೀರಾವರಿ ಒದಗಿಸಲಿದೆ. ಸುಮಾರು 300 ಮೆಗಾವ್ಯಾಟ್​ ಜಲವಿದ್ಯುತ್ ಉತ್ಪನ್ನ ಮಾಡಲಿದೆ. ಹಾಗೇ, ಉತ್ತರಾಖಂಡ್​, ಉತ್ತರಪ್ರದೇಶ, ಹರ್ಯಾಣ, ದೆಹಲಿ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಿದೆ. ರೈತರಿಗೆ ನೀರು, ಕರೆಂಟ್‌ ಬವಣೆ ತೀರಲಿದೆ.

ಇವೆಲ್ಲದರ ಜೊತೆಗೆ ರಾಜ್ಯಾದ್ಯಂತ ಪ್ರಧಾನಮಂತ್ರಿ ಗ್ರಾಮ ಸಡಕ್​ ಯೋಜನೆಯಡಿ ರಸ್ತೆ ಸುಧಾರಣೆ, ವಿಸ್ತರಣೆಗೆ ಸಂಬಂಧಿಸಿದಂತೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 133 ಗ್ರಾಮಗಳ 1157 ಕಿಮೀ ಉದ್ದರ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಇದು ಅಂದಾಜು ವೆಚ್ಚ 625 ಕೋಟಿ ರೂಪಾಯಿ ಆಗಲಿದೆ. 450 ಕೋಟಿ ರೂ.ವೆಚ್ಚದ 151 ಸೇತುವೆಗಳ ನಿರ್ಮಾಣ, ಆರೋಗ್ಯ ಸುಧಾರಣೆಗೆ ಉಧಾಂನಗರದಲ್ಲಿ ಏಮ್ಸ್​ ರಿಶಿಕೇಶ ಸೆಟಲೈಟ್​ ಕೇಂದ್ರ ಮತ್ತು ಪಿಥೋರ್​ಗಡ್​​ನಲ್ಲಿ ಜಗಜೀವನ್​ ರಾಮ್​ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ 2400 ಮನೆಗಳ ನಿರ್ಮಾಣಕ್ಕೆ ಅಡಿಪಾಯ, 13 ಜಿಲ್ಲೆಗಳಲ್ಲಿ 73 ನೀರು ಪೂರೈಕೆ ಯೋಜನೆಗಳಿಗೂ ಚಾಲನೆ, ಕಾಶಿಪುರ್​​ನಲ್ಲಿ 41 ಎಕರೆ ಅರೋಮಾ ಪಾರ್ಕ್​ ಮತ್ತು ಸಿತಾರ್​ಗಂಜ್​​ನಲ್ಲಿ 40 ಎಕರೆ ವಿಸ್ತೀರ್ಣದ ಪ್ಲಾಸ್ಟಿಕ್​ ಇಂಡಸ್ಟ್ರಿಯಲ್​ ಪಾರ್ಕ್​​ಗೆ ಕೂಡ ಅಡಿಗಲ್ಲು ಹಾಕಲಿದ್ದಾರೆ.

Share Post