ದ್ವಿಚಕ್ರವಾಹನಗಳಿಗೆ ಪೆಟ್ರೋಲ್ ದರದಲ್ಲಿ 25ರೂ ಕಡಿತ
ರಾಂಚಿ : ದ್ವಿಚಕ್ರ ಸವಾರರಿಗೆ ಜಾರ್ಖಂಡ್ ಸರ್ಕಾರದಿಂದ ಖುಷಿಯ ವಿಷಯವೊಂದು ಹೊರಬಿದ್ದಿದೆ. ದ್ವಿಚಕ್ರವಾಹನಗಳಿಗೆ ಪೆಟ್ರೋಲ್ ದರದಲ್ಲಿ 25ರೂ ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಿಸಿದ್ದಾರೆ.
ಸರ್ಕಾರ ಸಹಾಯಧನ ನೀಡುವ ಮೂಲಕ ಈ ಒಂದು ಯೋಜನೆ ರೂಪಿಸಿದೆ. ಈ ದರ ಜನವರಿ ೨೬ರಿಂದ ಅನ್ವಯವಾಗಲಿದೆ.
ಟ್ವೀಟ್‌ನಲ್ಲಿ ಏನಿದೆ
ಜಾರ್ಖಂಡ್ ಮುಖ್ಯಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಬಡವರು, ಮಧ್ಯಮ ವರ್ಗದ ಜನರು ಹೆಚ್ಚು ತೊಂದರೆಗೊಳಗಾಗಿದ್ದಾರೆ ಹೀಗಾಗಿ ರಾಜ್ಯ ಸರ್ಕಾರವು ದ್ವಿಚಕ್ರವಾಹನಗಳಿಗೆ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ೨೫ರೂ ಸಹಾಯ ಧನ ನೀಡಲು ನಿರ್ಧರಿಸಿದೆ. ೨೦೨೨ರ ಜನವರಿ ೨೬ರಿಂದ ಈ ಪ್ರಯೋಜನ ಪಡೆಯಲಿದೆ ಎಂದು ಹೇಳಿದ್ದಾರೆ.
पेट्रोल-डीजल के मूल्य में लगातार इजाफा हो रहा है, इससे गरीब और मध्यम वर्ग के लोग सबसे अधिक प्रभावित हैं। इसलिए सरकार ने राज्य स्तर से दुपहिया वाहन के लिए पेट्रोल पर प्रति लीटर ₹25 की राहत देगी, इसका लाभ 26 जनवरी 2022 से मिलना शुरू होगा:- श्री @HemantSorenJMM pic.twitter.com/MsinoGS60Y
— Office of Chief Minister, Jharkhand (@JharkhandCMO) December 29, 2021