ಸಚಿವ ಸೋಮಣ್ಣನ ದರ್ಬಾರ್: ಟ್ರಾಫಿಕ್ನಲ್ಲಿ ಜನ ಹೈರಾಣ
ಬೆಂಗಳೂರು: ವಸತಿ ಸೋಮಣ್ಣ ಕಾರ್ಯಕ್ರಮಕ್ಕೆ ಹಾಜರಾಗಲು ಬೆಂಗಳೂರು ಪೊಲೀಸರು ಸಿಗ್ನಲ್ ಫ್ರೀ ಕಾರಿಡಾರ್ ವ್ಯವಸ್ಥೆ ಮಾಡಿಕೊಟ್ಟರು. ಇದರಿಂದ ಪ್ರಯಾಣಿಕರು ಟ್ರಾಫಿಕ್ ಜಾಮ್ನಲ್ಲಿ ಪರದಾಡುವ ಪರಿಸ್ಥಿತಿ ಉಂಟಾಯಿತು. ಇಂತಹ ಅವಕಾಶ ಜನಸಾಮಾನ್ಯರಿಗೆ ಕೊಡ್ತಾರಾ ನಮ್ ಪೊಲೀಸ್ರು..?ಇವರಿಗೆ ಕಾರ್ಯಕ್ರಮಕ್ಕೆ ತಡವಾಗುವ ಹಾಗಿದ್ರೆ ಬೇಗ ಹೊರಡಬೇಕಿತ್ತು ಅದು ಬಿಟ್ಟು ಅಧಿಕಾರ ಇದೆ ಅಂತ ಸಿಕ್ಕ ಸಿಕ್ಕಲ್ಲೆಲ್ಲಾ ಚಲಾಯಿಸಿದ್ರೆ ಉತ್ತರ ಕೊಡೋರು ಯಾರು? ಇದರಿಂದ ಪರದಾಡಿದ್ದು ನಮ್ಮ ಪ್ರಯಾಣಿಕರು.
ಬೆಂಗಳೂರಿನ ಟ್ರಾಫಿಕ್ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಇಂತಹ ಸಂದರ್ಭದಲ್ಲಿ ಒಬ್ಬ ಸಚಿವನಿಗಾಗಿ ಹತ್ತು ನಿಮಿಷಗಳ ಕಾಲ ಸಿಗ್ನಲ್ ಫ್ರೀ ಕಾರಿಡಾರ್ ಮಾಡಿಕೊಟ್ಟಿತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆ.ಆರ್.ಸಿಗ್ನಲ್ನಿಂದ ಆನಂದರಾವ್ ಸರ್ಕಲ್ವರೆಗೂ ರಸ್ತೆ ಬಂದ್ ಮಾಡಿ ಸಚಿವರ ಕಾರಿಗೆ ದಾರಿ ಬಿಟ್ಟಿದ್ದಾರೆ. ಅಗತ್ಯ ಕೆಲಸಗಳು ಅವರಿಗೇನಾ..ನಮಗೂ ಇರುತ್ತೆ ಆಸ್ಪತ್ರೆ, ಕೆಲಸ, ಇನ್ಯಾವುದೋ ತ್ವರಿತ ಕೆಲಸ ಕಾರ್ಯಗಳು ನಮಗೂ ಇರುತ್ತೆ ಹೀಗಿರುವಾಗ ಸಚಿವರು ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.