ರಕ್ಷಕರೇ ರಾಕ್ಷಸರಾದಾಗ..?
ನೆಲ್ಲೂರು: ಕೌನ್ಸಿಲಿಂಗ್ ನೆಪದಲ್ಲಿ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಯತ್ನ ನಡೆಸಿರುವ ಘಟನೆ ನೆಲ್ಲೂರಿನಲ್ಲಿ ನಡೆದಿದೆ. ಸಾಮಾನ್ಯವಾಗಿ ಕಷ್ಟ, ಕಿರುಕುಳ, ತೊಂದರೆ, ದೌರ್ಜನ್ಯ ಇಂಥದೇನಾದ್ರು ನಡೆದ್ರೆ ಸಹಾಯಕ್ಕಾಗಿ ನಾವು ಮೊದಲು ಹೋಗೋದೆ ಪೊಲೀಸರ ಬಳಿ. ಯಾಕಂದ್ರೆ ಒಂದು ಭರವಸೆ ಅವರು ನಮ್ಮ ಕಷ್ಟಗಳಿಗೆ ಒಂದು ಪರಿಹಾರ ತೋರಿಸ್ತಾರೆ ಅಂತ.
ಆದ್ರೆ ಈ ಘಟನೆ ಕೇಳಿದ್ರೆ ಕೋಪ ನೆತ್ತಿಗೇರೋದು ಗ್ಯಾರೆಂಟಿ. ರಕ್ಷಣೆ ಮಾಡಬೇಕಾದವರೆ ರಾಕ್ಷಸರಾದ್ರೆ ಯಾರ ಬಳಿ ಹೋಗಿ ನ್ಯಾಯ ಕೇಳೋದು..? ಬಾಲಕಿಗೆ ಕೌನ್ಸಿಲಿಂಗ್ ಕೊಡುವ ನೆಪದಲ್ಲಿ ಮನೆಗೆ ಕರೆದ ಚಿಟ್ಟಮೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸುಧಾಕರ್ ಹೇಯ ಕೃತ್ಯ ಎಸಗಿದ್ದಾನೆ. ಬಾಲಕಿಯ ತಂದೆಯನ್ನು ಅಂಗಡಿಗೆ ಕಳುಹಿಸಿ, ಬಾಲಕಿ ಮೇಲೆ ಅತ್ಯಾಚಾರ ಯತ್ನ ನಡೆಸಿದ್ದಾನೆ.
ಭಯಗೊಂಡ ಬಾಲಕಿ ಮನೆಗೆ ತೆರಳಿದ ಕೂಡಲೇ ಎಲ್ಲಾ ವಿಚಾರವನ್ನು ತನ್ನ ತಂದೆ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಬಾಲಕಿ ತಂದೆ ಪೊಲೀಸ್ ಠಾಣೆಗೆ ತೆರಳಿ ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸುಧಾಕರ್ ಕರೆಸಿ ವಿಚಾರಣೆ ನಡೆಸಿದಾಗ ಅತ್ಯಚಾರ ನಡೆಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಕೂಡಲೇ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ರಿಮ್ಯಾಂಡ್ ರೂಂಗೆ ಕಳುಹಿಸಿಕೊಡಲಾಗಿದೆ.