National

ಚಂಡೀಗಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಎಪಿಗೆ ಜಯ

ಚಂಡೀಗಡ: ಪಂಜಾಬ್‌ ರಾಜ್ಯಧಾನಿಯಾಗಿರುವ ಚಂಡೀಗಡ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು ಹೊರಗೆ ಬಿದ್ದಿದೆ. ಒಟ್ಟು ೩೫ ವಾರ್ಡ್ ಗಳಲ್ಲಿ ಆಮ್‌ ಆದ್ಮಿ ಪಕ್ಷ ೧೪ ಸ್ಥಾನಗಳಿಗೆ ಗೆಲುವು ಸಾಧಿಸಿದೆ.ಬಿಜೆಪಿ ೧೨ ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ ೮ ಹಾಗೂ ಅಕಾಲಿ ದಳ ೧ ವಾರ್ಡ್‌ ಗಳಲ್ಲಿ ಜಯಗೊಂಡಿದೆ. ಡಿಸೆಂಬರ್‌ ೨೪ ರಂದು ಚುನಾವಣೆ ನಡೆದಿತ್ತು. ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದ ಎಎಪಿ ಜಯಭೇರಿ ಕಂಡಿದೆ.
ಫಲಿತಾಂಶ ಕುರಿತು ಮಾತನಾಡಿದ ಎಎಪಿ ನಾಯಕ ರಾಘವ ಚಡ್ಡಾ, ಅರವಿಂದ್‌ ಕೇಜ್ರೀವಾಲ್‌ ಅವರ ಆಡಳಿತವನ್ನು ಜನರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಜನರು ಈ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಿದ್ದಾರೆ. ಇದ್ದರಿಂದ ನಮಗೆ ಮುಂಬರುವ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಏನೆಂದು ತೋರಿಸಲಿದ್ದೇವೆ ಎಂದರು.

Share Post