CrimeDistricts

ಮಗಳ ರಕ್ಷಣೆಗಾಗಿ ತಾಯಿಯ ತೊಳಲಾಟ: ವಿಹಿಂಪಗೆ ಪತ್ರ

ಮಂಗಳೂರು: ಡ್ರಗ್ಸ್‌ ದಂಧೆಯಿಂದ ಮಗಳನ್ನು ಹೊರತರಲು ಮಂಗಳೂರಿನ ಬಿಜೈ ಮೂಲದ ಗ್ರೇಸಿ ಪಿಂಟೋ ಎಂಬ ಕ್ರಿಶ್ಚಿಯನ್‌ ಮಹಿಳೆ ವಿಶ್ವ ಹಿಂದೂ ಪರಿಷತ್‌ಗೆ ಸಹಾಯ ಮಾಡುವಂತೆ ಪತ್ರ ಬರೆದಿದ್ದಾರೆ. ಸುರತ್ಕಲ್ ನಿವಾಸಿ ಶರೀಫ್ ಸಿದ್ದಿಕಿ ಎಂಬಾತನ ಡ್ರಗ್ ದಂಧೆಯಲ್ಲಿ ನನ್ನ ಮಗಳು ಸಿಲುಕಿದ್ದಾಳೆ.

ಕಳೆದ ಮೂರು ವರ್ಷಗಳಿಂದ ಡ್ರಗ್ ದಾಸಳಾಗಿರುವ ಮಗಳನ್ನು ಸರಿಪಡಿಸಿ ತನಗೆ ಒಪ್ಪಿಸುವಂತೆ ಮಹಿಳೆ ಪತ್ರದಲ್ಲಿ ತಿಳಿಸಿದ್ದಾರೆ. ಮಗಳಿಗೆ ನಿರಂತರ ಲೈಂಗಿಕ ಕಿರುಕುಳ ನೀಡಿ ಡ್ರಗ್ ಪೂರೈಕೆ ಮಾಡುತ್ತಿದ್ದಾರೆ. ಡ್ರಗ್ ಚಟಕ್ಕೆ ಬಿದ್ದ ನನ್ನ ಮಗಳು ಮಾನಸಿಕವಾಗಿ ಕುಗ್ಗಿ ಅಸ್ವಸ್ಥತೆಗೆ ಒಳಗಾಗಿದ್ದಾಳೆ.

ಸಿದ್ದಿಕಿ ಮತ್ತು ಅವನ ಸ್ನೇಹಿತರಿಂದ ನಿರಂತರ ಡ್ರಗ್ ಪೂರೈಕೆ ಮತ್ತು ದೌರ್ಜನ್ಯ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಠಾಣೆ ಮತ್ತು ಸಮುದಾಯದ ಗುರುಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಇದುವರೆಗೂ ನನಗೆ ನ್ಯಾಯ ಸಿಕ್ಕಿಲ್ಲ. ನನ್ನ ಮಗಳ ಪರಿಸ್ಥಿತಿಯನ್ನು ನೋಡಲು ನನ್ನಿಂದಾಗುತ್ತಿಲ್ಲ. ದಯವಿಟ್ಟು ನನ್ನ ಮಗಳನ್ನ ರಕ್ಷಣೆ ಮಾಡಿ ಎಂದು ವಿಹಿಂಪಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾಳೆ.

Share Post