ಸಿಲಿಕಾನ್ ಸಿಟಿಯಲ್ಲಿ ವಿದ್ಯತ್ ಚಾಲಿತ ಬಸ್‌ಗಳ ಹವಾ:ಸಿಎಂ ಲೋಕಾರ್ಪಣೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸೌಧದ ಪೂರ್ವದ್ವಾರದ ಬಳಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಖರೀದಿಸಲಾದ ಬಿಎಂಟಿಸಿ ಸಂಸ್ಥೆಯ ವಿದ್ಯುತ್ ಚಾಲಿತ 40 ಬಸ್ ಹಾಗೂ ಬಿಎಸ್ 6, 150 ಡೀಸೆಲ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ಸಾರಿಗೆ ಸರ್ಕಾರದ ಜೀವನಾಡಿ, ಸರ್ಕಾರದ ಚಲನ ಶೀಲತೆಯ ಸಂಕೇತ ಈ ಸಾರಿಗೆ ಇಲಾಖೆ. ಆಧುನಿಕ ಜಗತ್ತಿನಲ್ಲಿ ನಮ್ಮ ಸಾರಿಗೆ ಕೂಡ ಅಭಿವೃದ್ಧಿ ಹೊಂದಬೇಕು, ಸಂಪೂರ್ಣ ಸಾರಿಗೆ ಇಲಾಖೆ ಪುನಶ್ಚೇತನ ಮತ್ತು ಆರ್ಥಿಕ ಸ್ವಾವಲಂಬನೆ ಆಗಬೇಕು ಆಗ ಮಾತ್ರ ಜನ ಸೇವೆ, ಸರ್ಕಾರದ ಮೇಲಿನ ಹೊರೆ ಎಲ್ಲವೂ ಕಡಿಮೆಯಾಗುತ್ತದೆ. ಹಾಗಾಗಿ ವಿದ್ಯುತ್ ಚಾಲಿತ ಹಾಗೂ ಬಿಎಸ್6 ಬಸ್‌ಗಳಿಗೆ ಚಾಲನೆ ಕೊಟ್ಟಿದ್ದೇವೆ. ಇದು ಹೈಡ್ರೋಕಾರ್ಬನ್ ಉಪಯೋಗ ಕಡಿಮೆ ಮಾಡುತ್ತದೆ.
ಜೊತೆಗೆ ಪಕೃತಿ ಮಲಿನದಿಂದ ಮುಕ್ತವಾಗಿರಿಸಲು ಈ ಬಸ್‌ಗಳನ್ನು ತರಲಾಗಿದೆ ಎಂದರು. ಲೋಕಾರ್ಪಣೆ ವೇಳೆ ಸಾರಿಗೆ ಸಚಿವ ಶ್ರೀರಾಮುಲು ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪಿಸಿ ಮೋಹನ್ , ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಉಪಾಧ್ಯಕ್ಷ ವೆಂಕಟೇಶ್ ಮತ್ತು ಇತರರು ಉಪಸ್ಥಿತರಿದ್ದರು.