ಇಂದು ಸಿಎಂ ಮಹತ್ವದ ಸಭೆ: ಟಫ್ ರೂಲ್ಸ್ ಜಾರಿ?
ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಳ ಹಿನ್ನೆಲೆ ಸಿಎಂ ಬೊಮ್ಮಾಯಿ ಇಂದು ಸಭೆ ನಡೆಸಲಿದ್ದಾರೆ. ಕೊರೊನಾ ಕೇಸ್‌ಗಳೂ ಸಹ ಹೆಚ್ಚಾಗುತ್ತಿರುವ ಹಿನ್ನೆಲೆ ಸ್ಥಳೀಯವಾಗಿ ಹರಡುತ್ತಿರುವ ವೈರಸ್ ತಡೆಗಟ್ಟಲು ನಿಯಮಗಳನ್ನು ಜಾರಿಗೊಳಿಸಬೇಕಾಗಿದೆ. ಅಲ್ಲದೆ ಹೊಸ ವರ್ಷಾಚರಣೆಗೆ ಹೊಸ ನಿಯಮಗಳನ್ನು ಜಾರಿಗೆ ತರಲು ತೀರ್ಮಾನ ಮಾಡಿದ್ದಾರೆ.
ತಜ್ಞರ ಸಲಹೆ ಮೇರೆಗೆ ಇಂದು ಬೆಳಗ್ಗೆ ಒಂಭತ್ತು ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ಟಫ್ ರೂಲ್ಸ್ ಜಾರಿಮಾಡುವ ಸಾಧ್ಯತೆಯಿದೆ. ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟೆಚ್ಚರಕ್ಕೆ ವಹಿಸುವಂತೆ ಆದೇಶಿಸಬಹುದು. ಹೊಸ ವರ್ಷಾಚರಣೆಗಾಗಿ ಮತ್ತೊಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ನೈಟ್ ಕರ್ಪ್ಯೂ ಜಾರಿಗೊಳಿಸುವ ಸಾಧ್ಯತೆಯಿದೆ.
ನೈಟ್ ಪಾರ್ಟಿಗಳಿಗೆ ಕಡಿವಾಣ ಹಾಖುವ ಸಾಧ್ಯತೆಯಿದೆ. ಇಂದಿನ ಸಭೆಯಲ್ಲಿ ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳು, ತಜ್ಞರು ಭಾಗಿಯಾಗಲಿದ್ದಾರೆ.