ಸಾರ್ವಜನಿಕ ಸೆಲಬ್ರೇಷನ್‌ಗೆ ನಿಷೇಧ: ಕಮಲ್ ಪಂತ್
ಬೆಂಗಳೂರು: ಎಲ್ಲರೂ ಕಾತರದಿಂದ ಕಾಯ್ದಿದ್ದ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆಯಿಂದ ನಿರ್ಬಂಧ ಹೇರಲಾಗಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್ ಸಾರ್ವಜನಿಕ ಸೆಲಬ್ರೇಷನ್‌ಗೆ ಅವಕಾಶ ಇಲ್ಲ ಎಂದಿದ್ದಾರೆ.
ಸರ್ಕಾರ ಬಿಡುಗಡೆ ಮಾಡುವ ಮಾರ್ಗ ಸೂಚಿ ಪ್ರಕಾರ ಮಾತ್ರ ಹೊಸ ವರ್ಷಾಚರಣೆ ನಡೆಯಲಿದೆ. ಹೊಟೇಲ್, ಪಬ್, ರೆಸ್ಟೋರೆಂಟ್‌ಗಳಲ್ಲಿ 50-50ಸೂತ್ರಕ್ಕೆ ಅವಕಾಶ ನೀಡಿದ್ದಾರೆ. ಮೊದಲೇ ಬುಕ್ಕಿಂಗ್ ಮಾಡಿಕೊಂಡಿದ್ದರೆ ಮಾತ್ರ ಆಚರಣೆಗೆ ಅವಕಾಶ ಎಂದಿದ್ದಾರೆ. ಹೊರಾಂಗಣ ಸಂಭ್ರಮಾಚರಣೆಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಎಂ.ಜಿ.ರೋಡ್. ಬ್ರಿಗೇಡ್ ರೋಡ್, ಕೋರಮಂಗಲ ಇತರೆಡೆ ರೋಡ್ ಶೋ ಹಾಗೂ ದೊಡ್ಡಮಟ್ಟದಲ್ಲಿ ಸಾವಿರಾರು ಜನ ಸೇರುವುದು, ಡಿಜೆ-ಡಾನ್ಸ್, ಸ್ಟೇಜ್ ಪ್ರೋಗ್ರಾಂಗಳಿಗೆ ನಿಷೇಧ ಹೇರಲಾಗಿದೆ.
ಒಂದು ವೇಳೆ ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಮಲ್ ಪಂತ್ ತಿಳಿಸಿದ್ದಾರೆ.