ರಾಜಕೀಯ ಸೇರೋ ಬಗ್ಗೆ ಅಂತಿಮ ನಿರ್ಧಾರವಿಲ್ಲ-ಹರ್ಭಜನ್ ಸಿಂಗ್
ನವದೆಹಲಿ : ರಾಜಕೀಯ ಸೇರಿಕೊಳ್ಳಲು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಂದ ಆಫರ್ ಬಂದಿವೆ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ,
ಸುಮಾರು 23 ವರ್ಷಗಳ ಕಾಲ ಟೀಂ ಇಂಡಿಯಾದ ಭಾಗವಾಗಿದ್ದ ಹರ್ಭಜನ್ ಸಿಂಗ್ 2016ರಿಂದ ಮೈದಾನಕ್ಕಿಳಿದಿರಲಿಲ್ಲ. ಆದರೆ, ಐಪಿಎಲ್ನಲ್ಲಿ ವಿವಿಧ ತಂಡಗಳ ಪರವಾಗಿ ಆಟವಾಡಿರುವ ಇವರು, ನಿನ್ನೆ ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದರು.ಇದರ ಬೆನ್ನಲ್ಲೇ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಮಾತನಾಡಿರುವ ಹರ್ಭಜನ್, ರಾಜಕೀಯ ಸೇರಿಕೊಳ್ಳುವುದಕ್ಕೆ ಸಂಬಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಈಗಾಗಲೇ ವಿವಿಧ ಪಕ್ಷಗಳಿಂದ ಆಫರ್ ಬಂದಿದ್ದು, ಕಾಂಗ್ರೆಸ್ನ ನವಜೋತ್ ಸಿಂಗ್ ಸಿಧು ಅವರೊಂದಿಗೆ ಮಾತುಕತೆ ಸಹ ನಡೆಸಿದ್ದೇನೆ. ಅವರು ಕಾಂಗ್ರೆಸ್ ಸೇರಿಕೊಳ್ಳುವಂತೆ ಆಫರ್ ನೀಡಿದ್ದು, ಈವರೆಗೆ ನಾನು ಯಾವುದೇ ಫೈನಲ್ ನಿರ್ಧಾರ ಕೈಗೊಂಡಿಲ್ಲ ಎಂದರು.ಎಲ್ಲ ಪಕ್ಷದ ರಾಜಕೀಯ ಮುಖಂಡರ ಬಗ್ಗೆ ನನಗೆ ಗೊತ್ತಿದೆ. ಪಕ್ಷ ಸೇರಿಕೊಳ್ಳುವುದಕ್ಕೂ ಮುಂಚಿತವಾಗಿ ನಾನು ಅದರ ಬಗ್ಗೆ ಖುದ್ದಾಗಿ ಘೋಷಣೆ ಮಾಡುತ್ತೇನೆ. ಪಂಜಾಬ್ನಲ್ಲಿ ಸೇವೆ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ಅದು ರಾಜಕೀಯ ಅಥವಾ ಬೇರೆ ಯಾವುದೇ ಮಾರ್ಗವಾಗಿರಬಹುದು ಎಂದಿದ್ದಾರೆ.
I know politicians from every party. I'll make an announcement beforehand if I'll join any party. Will serve Punjab, maybe via politics or something else, no decision has been taken yet:India off-spinner Harbhajan Singh announced his retirement from all forms of cricket on Friday pic.twitter.com/TTOd5lSRNW
— ANI (@ANI) December 25, 2021