HealthInternational

ಅಮೆರಿಕಾದಲ್ಲಿ ಡೆಲ್ಮಿಕ್ರಾನ್‌ ಆತಂಕ: ಡಬಲ್‌ ವೇರಿಯಂಟ್‌ಗೆ ಜನ ಸುಸ್ತು

ಅಮೆರಿಕಾ: ಚೈನಾ ಅದ್ಯಾವ ಘಳಿಗೆಯಲ್ಲಿ ಕೊರೊನಾ ವೈರಸ್‌ ಜೀವ ಪಡೆಯಿತೋ ಗೊತ್ತಿಲ್ಲ, ಇಡೀ ಪ್ರಪಂಚ ಒಂದಲ್ಲಾ ಒಂದು ವೈರಸ್‌ನಿಂದ ಬಳಲುತ್ತಲೇ ಇದೆ. ಒಂದಾದ ಮೇಲೊಂದರಂತೆ ಕೊರೊನ ವಿವಿಧ ರೂಪಾಂತರಿಗಳನ್ನು ಸೃಷ್ಟಿ ಮಾಡುತ್ತಲೇ ಬಂದಿದೆ.

ಪ್ರಪಂಚದ ಎಲ್ಲಾ ದೇಶಗಳು ಅಭಿವೃದ್ದಿಯತ್ತ ಗಮನ ಹರಿಸುವುದನ್ನು ಬಿಟ್ಟು ಈ ಮಹಾಮಾರಿಯನ್ನು ತಲಗಿಸುವ ಕಡೆ ಗಮನಹರಿಸಿದ್ದಾರೆ. ಈಗ ಕೊರೊನಾ ಮತ್ತು ಓಮಿಕ್ರಾನ್‌ ಸೇರಿ ಡೆಲ್ಮಿಕ್ರಾನ್‌ ಎಂಬ ಹೊಸ ವೈರಸ್‌ ಉತ್ಪತ್ತಿಯಾಗಿದೆ. ಇದು ಅಮೆರಿಕಾ ಸೇರಿದಂತೆ ಯುರೋಪ್‌ ದೇಶಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಯುಎಸ್‌ಎನಲ್ಲಿ ಒಂದೇ ದಿನಕ್ಕೆ 2ಲಕ್ಷ ಜನಕ್ಕೆ ಈ ಮಹಾಮಾರಿ ವಕ್ಕರಿಸಿದೆ. ಬ್ರಿಟನ್‌ನಲ್ಲಿ ಸಾಲು ಸಾಲಾಗಿ ಲಕ್ಷ ಲಕ್ಷ ಕೇಸ್‌ಗಳು ನಮೂದಾಗಿವೆ.

ಕೊರೊನಾ ಬಳಿಕ ಕೇಸ್‌ಗಳು ಬರ್ತಿರುವುದು ಇದೇ ಮೊದಲು. ವಿಷಯ ತಿಳಿದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಜನ ಲಸಿಕೆ ಪಡೆಯದೇ ಇರುವುದೇ ರೂಪಾಂತರಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

 

Share Post