Politics

ಪರಿಷತ್‌ನಲ್ಲಿ ಮಂಡನೆಯಾಗಲಿಲ್ಲ ಮತಾಂತರ ನಿಷೇಧ ಕಾಯ್ದೆ

ಬೆಳಗಾವಿ: ನಿನ್ನೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಇಂದು ಪರಿಷತ್‌ನಲ್ಲಿ ಮಂಡಿಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧಾರ ಮಾಡಿತ್ತು. ಆದರೆ, ಅದು ಇಂದು ಕೈಗೂಡಲಿಲ್ಲ. ಕೊನೆಗೂ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಪರಿಷತ್‌ನಲ್ಲಿ ಮಂಡಿಸುವ ನಿರ್ಧಾರದಿಂದ ಹಿಂದೆ ಸರಿದಿದೆ.

ಮುಂದಿನ ಅಧಿವೇಶನದಲ್ಲಿ ಪರಿಷತ್‌ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಲಾಗುತ್ತದೆ ಎಂದು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಇನ್ನೂ ಪರಿಷತ್‌ನಲ್ಲಿ ಅಂಗೀಕಾರವಾಗಿಲ್ಲ. ವಿಧಾನಸಭೆಯಲ್ಲಷ್ಟೇ ಅಂಗೀಕಾರವಾಗಿದೆ. ಹೀಗಾಗಿ, ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ ಅಂಗೀಕಾರವಾದರೆ ಮಾತ್ರ ಅದು ಕಾನೂನಾಗಿ ಜಾರಿಯಾಗುತ್ತದೆ.

ಆದರೆ ಈ ಅಧಿವೇಶನದಲ್ಲಿ ಅದು ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ಕಲಾಪದವರೆಗೂ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಲ್ಲ.

 

Share Post