Health

ಉತ್ತಮ ಆರೋಗ್ಯಕ್ಕೆ ಹೀರೆಕಾಯಿ ಮನೆ ಮದ್ದು

ಪ್ರತಿಯೊಬ್ಬರು ಆರೋಗ್ಯವಾಗಿರಲು ತರಕಾರಿಗಳು ಮುಖ್ಯ. ಪೌಷ್ಟಿಕಾಂಶ ಇರುವ ತರಕಾರಿ ತಿನ್ನುವುದರಿಂದ ಆರೋಗ್ಯವಾಗಿರುತ್ತಾರೆ. ಹೀಗೆ ಒಂದೊಂದು ತರಕಾರಿಯಲ್ಲೂ ಕೂಡ ವಿಟಮಿನ್‌ ಇರುತ್ತದೆ. ಹಾಗೇ ಹಿರೇಕಾಯಲ್ಲೂ ಕೂಡ ಕಡಿಮೆ ಕ್ಯಾಲೊರಿ ಮತ್ತು ನೀರಿನ ಅಂಶವನ್ನು ಹೊಂದಿದೆ ಇದು ತೂಕ ನಷ್ಟಕ್ಕೆ ಸೂಕ್ತ ಆಯ್ಕೆಯಾಗಿದೆ.
ಹೀರೆಕಾಯಿ ಸಹ ಒಂದು. ಒಂದ್ ಸೈಡ್ ನಿಂದ ನೋಡಿದ್ರೆ ಹಾಗಲಾಕಯಿ ಅನ್ನೋ ಹಾಗೆ ಹೊರ ನೋಟಕ್ಕೆ ಕಾಣೋ ಹೀರೆಕಾಯಿ, ರುಚಿ ರುಚಿಯಾದ ಅಡುಗೆಗೆಸಹಕಾರಿ.. ಹೀಗಾಗಿಯೇ ಅದೆಷ್ಟೋ ಜನ ಮನೆಯಲ್ಲಿ ಹಿರೇಕಾಯಿ ಪಲ್ಯ, ಹಿರೇಕಾಯಿ ಸಾಂಬರ್, ಹಿರೇಕಾಯಿ ಸಿಪ್ಪೆ ಚಟ್ನಿ, ಹಿರೇಕಾಯಿ ಬಜ್ಜಿ ಅಂತೆಲ್ಲ ಮಾಡಿ ತಿನ್ತಾರೆ..ಇದೆಷ್ಟೇ ಅಲ್ಲದೆ ಪ್ರತಿನಿತ್ಯ ತಪ್ಪದೆ ಹಿರೇಕಾಯಿ ಸೇವನೆ ಮಾಡೋದ್ರಿಂದ್ದ ಅದೆಷ್ಟು ಪ್ರಯೋಜನ ಇದೆ ಅಂತ ಒಮ್ಮೆ ಗೊತ್ತಾದ್ರೆ ಹೀರೆಕಾಯಿ ಸೇವನೆ ಬೇಡಪ್ಪಾ ಅಂತ ದೂರ ಓಡೋ ಜನ ಬಯಸಿ ಬಯಸಿ ಹಿರೇಕಾಯಿ ಸೇವನೆ ಮಾಡೋದಕ್ಕೆ ಮುಂದಾಗ್ತಾರೆ..ಉತ್ಕರ್ಷಣ ನಿರೋಧಕಗಳು ಮತ್ತು ಆಲ್ಕಲಾಯ್ಡ್ ಸಂಯುಕ್ತಗಳಿಂದ ಸಮೃದ್ಧವಾಗಿದೆ. ಹೀಗಾಗಿ ದೇಹದಲ್ಲಿನ ಅನೇಕ ಸಮಸ್ಯೆಗಳ ನಿಯಂತ್ರಣಕ್ಕೆ ಹಿರೇಕಾಯಿ ಮನೆ ಮದ್ದು ಇಲ್ಲಿದೆ.
ಮಧುಮೇಹ ನಿಯಂತ್ರಣ: ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ನರಳದ ಜನರೇ ಇಲ್ಲ.. ಎಷ್ಟೇ ಜಾಗೃತರಾಗಿದ್ರೂ ನಾವು ಸೇವನೆ ಮಾಡೋ ಆಹಾರ ಹಾಗೂ ನಮ್ಮ ಜೀವನ ಕ್ರಮದಿಂದ ಸಕ್ಕರೆ ಕಾಯಿಲೆ ಅನ್ನೋದು ನಮ್ಮನ್ನ ಕಾಡತೊಡಗಿದೆ. ಹೀಗಾಗಿ ಅತ್ಯಂತ ಕಡಿಮೆ ಕ್ಯಾಲೋರಿಗಳನ್ನ ಹೊಂದಿರುವ ಹೀರೆಕಾಯಿ ಹಲವು ಉತ್ಕರ್ಷಣ ನಿರೋಧಕ ಗುಣಗಳನ್ನ ಹೊಂದಿದೆ..ಹೀಗಾಗಿ ಹೀರೆಕಾಯಿ ಸೇವನೆ ಮಾಉವುದರಿಂದ ಮಧುಮೇಹಿಗಳು ಮಧುಮೇಹವನ್ನ ನಿಯಂತ್ರಣ ಮಾಡಬಹುದು
ದೃಷ್ಟಿ ದೋಷ ನಿವಾರಣೆ: ರಿಡ್ಜ್ ಸೋರೆಕಾಯಿಯಲ್ಲಿನ ವಿಟಮಿನ್ ಎ ಅಂಶ ಗಮನಾರ್ಹ ಹಾಗೂ ಪ್ರಮಾಣವು ದೃಷ್ಟಿ ಸುಧಾರಿಸುವಲ್ಲಿ ತೀವ್ರ ಪರಿಣಾಮಕಾರಿಯಾಗಿದೆ. ಮ್ಯಾಕ್ಯುಲರ್ ಡಿಜೆನರೇಶನ್, ಭಾಗಶಃ ಕುರುಡುತನ ಮತ್ತು ಇತರ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹ ಹೀರೆಕಾಯಿ ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಕಾರಿ: ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಎಂಬುದು ಪ್ರತಿಯೊಬ್ಬರ ಕನಸು.. ಹೀಗಾಗಿ ತೂಕ ಇಳಿಕೆ ಮಾಡಲು ಜಿಮ್, ವ್ಯಾಯಾಮ ಅಂತೆಲ್ಲಾ ಮಾಡೋ ಜನರು ಡಯೆಟ್ ಕೂಡ ಮಾಡಿ, ಕೆಲವು ನಿರ್ದಿಷ್ಟ ಆಹಾರಗಳನ್ನ ಮಾತ್ರ ಸೇವನೆ ಮಾಡ್ತಾರೆ.. ಹೀಗೆ ಡಯೆಟ್ ಮಾಡಿ ತೂಕ ಇಳಿಕೆ ಮಾಡಿಕೊಳ್ಳಬೇಕು ಅಂದುಕೊಳ್ಳೋ ಜನರು ಹೀರೆಕಾಯಿ ಸೇವನೆ ಮಾಡಿದ್ರೆ ಅಗತ್ಯ. ಹೀರೆಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದ್ದು ತೂಕ ಇಳಿಕೆಗೆ ಸಹಕಾರಿ.
ಮಲಬದ್ಧತೆ ನಿವಾರಣೆ: ಹಿರೇಕಾಯಿಯಲ್ಲಿ ಸೆಲ್ಯುಲೋಸ್ ಎಂಬ ನೈಸರ್ಗಿಕ ನಾರಿನ ಅಂಶ ಇದ್ದು ಇದು ಆಹಾರವನ್ನ ಸರಿಯಾಗಿ ಜೀರ್ಣ ಮಾಡುವಂತೆ ಮಾಡುತ್ತದೆ.. ಜೊತೆಗೆ ಹೀರೆಕಾಯಿ ಸೇವನೆ ಮಾಡುವುದು ದೇಹದಲ್ಲಿ ನಿರ್ಜಲಿಕರಣದ ಸಮಸ್ಯೆಯನ್ನ ತಪ್ಪಿಸುತ್ತದೆ.. ನಾವ ಸೇವಿಸುವ ಆಹಾರವನ್ನ ಸೂಕ್ತ ಪ್ರಮಾಣದಲ್ಲಿ ಜೀರ್ಣ ಮಾಡುವಷ್ಟು ನೀರಿನ ಪ್ರಮಾಣವನ್ನ ಹೀರೆಕಾಯಿ ಸೇವನೆ ನಮ್ಮ ದೇಹಕ್ಕೆ ಒದಗಿಸುತ್ತದೆ

Share Post