Lifestyle

ಸೋಪ್ಪಿನ ದೋಸೆ, ಮಾಡುವುದು ಹೇಗೆ?

ದೋಸೆಯಲ್ಲಿ ವಿವಿಧ ರೀತಿಯಲ್ಲಿ ತಯಾರು ಮಾಡಬಹುದು. ಸಾಮಾನ್ಯವಾಗಿ ಎಲ್ಲರೂ ರಾಗಿ, ಗೋದಿ, ನೀರ್‌ ದೋಸೆ ಹೀಗೆ ನಾನಾ ರೀತಿಯಲ್ಲಿ ಮಾಡುತ್ತೇವೆ. ಆದರೆ ದೋಸೆಯಲ್ಲೇ ಮತ್ತೊಂದು ರೆಸಿಪಿ ಮಾಡಬಹುದು ಅಂತಾ ಯಾರಿಗೂ ಗೊತ್ತಿಲ್ಲ. ಅದು ಸೋಪ್ಪಿನಿಂದ ಮಾಡಬಹುದಾದ ದೋಸೆ. ಅದುವೇ ಪಾಲಕ್‌ ದೋಸೆ… ಹೇಗೆ ಮಾಡೋದು ಅಂತ ತಿಳಿದುಕೊಳ್ಳೊಣ…

ಬೇಕಾಗುವ ಸಾಮಗ್ರಿಗಳು:
ಪಾಲಕ್ ಸೊಪ್ಪು- 1 ಕಟ್ಟು
ರುಬ್ಬಿದ ದೋಸೆ ಹಿಟ್ಟು – 2ಕಪ್
ಅಡುಗೆ ಎಣ್ಣೆ- ಅರ್ಧ ಕಪ್
ರುಚಿಗೆ ತಕ್ಕಷ್ಟು ಉಪ್ಪು
ಈರುಳ್ಳಿ-1
ಜೀರಿಗೆ- ಸ್ವಲ್ಪ
ಬೆಳ್ಳುಳ್ಳಿ- 1
ಕೊತ್ತಂಬರಿ ಸೊಪ್ಪು- ಸ್ವಲ್ಪ
ಹಸಿಮೆಣಸಿನಕಾಯಿ-4
ಮೆಣಸಿನಪುಡಿ- ಸ್ವಲ್ಪ
ಮಾಡುವ ವಿಧಾನ
ಒಂದು ಬಾಣಲೆಗೆ ಅಡುಗೆ ಎಣ್ಣೆಯನ್ನು ಹಾಕಿ ಜೊತೆಗೆ ತೊಳೆದ ಪಾಲಕ್ ಸೊಪ್ಪು ಹಾಕಿ ಬಾಡುವ ತನಕ ಹುರಿಯಿರಿ. ನಂತರ ಒಂದು ಮಿಕ್ಸಿಯಲ್ಲಿ ಸೊಪ್ಪು ಮತ್ತು ಉಪ್ಪನ್ನು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ. ಎಲ್ಲ ಪದಾರ್ಥಗಳು ಆರಿದ ನಂತರ ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ದೋಸೆ ರೆಡಿಯಾಗುತ್ತದೆ.

Share Post