Sports

ರವಿ ಶಾಸ್ತ್ರಿ ಹೇಳಿಕೆ ನೆನೆಪಿಸಿಕೊಂಡ R Ashwin

ನವದೆಹಲಿ : ಎರಡು ವರ್ಷಗಳ ಹಿಂದೆ R Ashwin ವೃತ್ತಿ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆಸಿಕೊಂಡಿದ್ದಾರೆ. ESPN Cricinfo ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಶ್ವಿನ್‌ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ರವಿಶಸ್ತ್ರಿ ಅವರ ಮಾತು ನನಗೆ ತೀವ್ರ ಘಾಸಿ ಉಂಟು ಮಾಡಿತ್ತು ಎಂದು ತಿಳಿಸಿದ್ದಾರೆ. ೨೦೧೯ರಲ್ಲಿ ಆಸ್ಟ್ರೇಲಿಯಾದಲ್ಲಿ ಕುಲ್ದೀಪ್‌ ಯಾದವ್‌ ಐದು ವಿಕೆಟ್‌ಗಳ ಸಾಧನೆ ಮಾಡಿದ್ದರು. ಅಂದಿನ ಕೋಚ್‌ ಆಗಿದ್ದ ರವಿಶಾಸ್ತ್ರಿ, ವಿದೇಶದಲ್ಲಿ ಅಗ್ರಮಾನ್ಯ ಸ್ಪಿನ್ನರ್‌ ಎಂದರೆ ಅದು ಕುಲ್‌ದೀಪ್‌ ಯಾದವ್‌ ಮಾತ್ರ ಎಂದು ಹೇಳಿದ್ದರು.

ಕುಲ್ದೀಪ್‌ ಐಸು ವಿಕೆಟ್‌ ತೆಗೆದಿದ್ದು ನನಗೂ ಸಂತಸವಾಗಿತ್ತು ಆದರೆ ರವಿಶಸ್ತ್ರಿ ಅವರ ಮಾತು ಮಾತ್ರ ತೀವ್ರ ನೋವುಂಟು ಮಾಡಿತ್ತು. ಆಸ್ಟ್ರೇಲಿಯಾದಲ್ಲಿ ಸ್ಪಿನ್ನರ್‌ ೫ ವಿಕೆಟ್‌ ತೆಗೆಯುವುದು ಸುಲಭವಿಲ್ಲ. ನಾನು ಕೂಡ ಆ ಪಂದ್ಯದಲ್ಲು ಚೆನ್ನಾಗಿಯೇ ಆಡಿದ್ದೆ ಆದರೆ ೫ ವಿಕೆಟ್‌ ತೆಗೆದುಕೊಂಡಿರಲಿಲ್ಲ ಅಷ್ಟೇ. ರವಿ ಶಾಸ್ತ್ರಿ ಅವರ ಹೇಳಿಕೆಯನ್ನು ಕೇಳಿದ ಮೇಲೆ ನನ್ನನ್ನು ಬಸ್‌ಕೆಳಗೆ ತಳ್ಳಿ ನಜ್ಜುಗುಜ್ಜು ಮಾಡಿದ ಅನುಭವವಾಗಿತ್ತು. ಎಲ್ಲರಂತೆ ನನಗೂ ರವಿ ಮೇಲೆ ಅಪಾರ ಗೌರವ ಇದೆ ಎಂದಿದ್ದರೆ.

ತಂಡದ ಆಟಗಾರ ಚೆನ್ನಾಗಿ ಆಡಿದಾಗ ಸಂತಸದಲ್ಲಿ ಭಾಗವಹಿಸುವುದು ನಮ್ಮೆಲ್ಲರಿಗೂ ಕಲಿಸಲಾಗಿರುತ್ತದೆ. ಇದು ಕ್ರೀಡಾ ಸ್ಪೂರ್ತಿಯೂ ಹೌದು. ಆದರೆ ಅಂದು ರವಿ ಆಡಿದ ಮಾತಿನಿಂದ ನಾನು ಸಂತೋಷಕೂಟಕ್ಕೆ ಹೋಗದಿರಲು ನಿರ್ಧರಿಸಿದ್ದೆ. ನಂತರ ಹೆಂಡತಿ ಮಕ್ಕಳೊಂದಿಗೆ ಮಾತನಾಡಿದ ಬಳಿಕ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದೆ. ಎಂದು ಅಶ್ವಿನ್‌ ಹೇಳಿಕೊಂಡಿದ್ದಾರೆ.

R Ashwin

Share Post