ಡಿಸೆಂಬರ್ 31ರಂದು ರಾಜ್ಯ ಸ್ತಬ್ಧ: ಸರ್ಕಾರಕ್ಕೆ ಎಚ್ಚರಿಕೆಯ ಘಂಟೆ
ಬೆಂಗಳೂರು: ಡಿಸೆಂಬರ್ 31ಕ್ಕೆ ರಾಜ್ಯ ಬಂದ್ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಘೋಷಣೆ ಮಾಡಿದೆ. ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ ಪ್ರತಿಭಟನೆ ನಡೆಯಲಿದೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೆ ಎಲ್ಲರೂ ಪಕ್ಷಾತೀತವಾಗಿ ಹಾಜರು ಆಗಬೇಕು ಎಂದು ವಾಟಾಲ್ ನಾಗರಾಜ್ ಮನವಿ ಮಾಡಿದ್ರು. ಜೊತೆಗೆ ಸರ್ಕಾರಕ್ಕೆ ಒಂದು ಸೂಚನೆಯನ್ನು ಕೂಡ ವಾಟಾಳ್ ನಾಗರಾಜ್ ನೀಡಿದ್ರು.
ಡಿಸೆಂಬರ್ ೩೧ರೊಳಗೆ ಸರ್ಕಾರ ಎಂಇಎಸ್ ಅನ್ನು ನಿಷೇಧ ಮಾಡಿದ್ದೇ ಆದ್ರೆ ನಾವು ಪ್ರತಿಭಟನೆ ಕೈ ಬಿಡುತ್ತೇವೆ ಎಂಬುದನ್ನು ತಿಳಿಸಿದ್ರು. ನಾವು ಇಲ್ಲಿವರೆಗು ಗಡುವು ನೀಡಿದ್ವಿ ಯಾವುದೇ ಪ್ರಯೋಜನ ಆಗ್ಲಿಲ್ಲ. ಇನ್ನು ಒಂದು ಅವಕಾಶ ಇದೆ ೩೧ರೊಳಗೆ ಬ್ಯಾನ್ ಮಾಡಿ ಇಲ್ಲದಿದ್ರೆ ಪ್ರತಿಭಟನೆ ಬಿಸಿಯನ್ನು ನೀವು ಅನುಭವಿಸಲೇಬೇಕಾಗುತ್ತದೆ ಎಂದ್ರು. ಕರ್ನಾಟಕದ ಇತಿಹಾಸಲ್ಲಿ ಇದೊಂದು ಈ ಬಂದ್ ಚಿರಸ್ಥಾಯಿಯಾಗಲಿದೆ.
ಇದು ಬಲವಂತದ ಬಂದ್ ಅಲ್ಲ ಕರ್ನಾಟಕ ಜನತೆ ಎಂಇಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ, ಇದು ಕನ್ನಡಿಗರ ಬಂದ್ ಯಾವುದೇ ಕಾರಣಕ್ಕೂ ವಿಫಲ ಆಗೋದಿಲ್ಲ ಎಲ್ಲರ ಸಹಕಾರ ನಮಗೆ ಸಿಕ್ಕೇ ಸಿಗುತ್ತೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹೇಳಿದ್ರು. ಬಂದ್ಗೆ ಎಲ್ಲಾ ಸಂಗಟನೆಗಳು ಸಾಥ್ ನೀಡಲಿವೆ. ಪ್ರತಿಯೊಬ್ಬ ಕನ್ನಡಿಗನು ಇದಕ್ಕೆ ಸಹಕಾರ ಕೊಟ್ಟೇ ಕೊಡ್ತಾನೆ ಎಂದ್ರು.
ಈ ವೇಳೆ ವಂದೇ ಮಾತರಂ ಸಂಘಟನೆಯ ರಾಜ್ಯಾಧ್ಯಕ್ಷ ಶಿವಕುಮಾರ್ ಕೇಳಿದ ಪ್ರಶ್ನೆಗೆ ಗದ್ದಲ ಉಂಟಾಯಿತು. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಂದ್ ಮಾಡುವುದು ಬೇಕಾ? ಎಂದಿದ್ದಕ್ಕೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು. ಇಲ್ಲಿ ನಮ್ಮ ಮನೆ ಹೊತ್ತಿ ಉರಿಯುತ್ತಿದೆ ನಿಮಗೆ ವರ್ಷಾಚರಣೆ ಬೇಕಾ..?ಎಂದು ಸಭಾಯಿಂದ ಹೊರಹಾಕಲು ತಳ್ಳಾಟ..ನೂಕಾಟ ಮಾಡಿದ್ರು. ಕೊನೆಗೆ ಶಿವಕುಮಾರ್ ನಾಯಕ್ನನ್ನು ಪೊಲೀಸರು ವಶಕ್ಕೆ ಪಡೆದ್ರು.