CrimeNational

ರೈಲ್ವೆ ನಿಲ್ದಾಣದಲ್ಲಿ ಮಾರಿದ್ದು ಕಾಫಿ-ಟೀ ಅಲ್ಲ, ರೈಲು ಎಂಜಿನ್

ಬಿಹಾರ್:‌ ಸಾಮಾನ್ಯವಾಗಿ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕಾಫಿ, ಟೀ, ತಿಂಡಿ ತಿನಿಸು ಮಾರಟ ಮಾಡುವುದು ಸಾಮಾನ್ಯ ಸಂಗತಿ, ಆದ್ರೆ ಇಲ್ಲೊಬ್ಬ ಭೂಪ ಏಕಾಏಕಿ ರೈಲ್ವೆ ಎಂಜಿನ್‌ ಮೇಲೆಯೇ ಕಣ್ಣಾಕಿದ್ದಾನೆ. ಪಕ್ಕಾ ಪ್ಲಾನ್‌ ಮಾಡ್ಕೊಂಡು ನಕಲಿ ಆಧಾರ ಸೃಷ್ಟಿ ಮಾಡಿ ಎಂಜಿನ್‌ ಅನ್ನು ಹಳೆ ಸಾಮಾನ್‌ ಮಾರುವ ಮಾಫಿಯಾಗಿ ಮಾರಿಬಿಟ್ಟಿದ್ದಾನೆ.

ಈ ಕೆಲಸ ಮಾಡಿದ್ದು ಬೇರ್ಯಾರೂ ಅಲ್ಲ ಉಂಡ ಮನೆಗೆ ಕನ್ನ ಹಾಕುವಂತೆ ಅಲ್ಲಿ ಕೆಲಸ ಮಾಡುವ ಎಂಜಿನಿಯರ್‌ ರಾಜೀವ್.‌ ಪೂರ್ಣಿಯಾ ರೈಲ್ವೆ ಸ್ಟೇಷನ್‌ ಬಳಿ ನಿಂತಿದ್ದ ಉಳೆ ರೈಲ್ವೆ ಎಂಜಿನ್‌ ಮೇಲೆ ಈ ಭೂಪನ ಕಣ್ಣು ಬಿದ್ದಿದೆ. ಈತನಿಗೆ ಓರ್ವ ಪೊಲೀಸ್‌ ಮತ್ತು ಒಬ್ಬ ಸಹಾಯಕನ ಕುಮ್ಮಕ್ಕಿದೆ. ಮೂವರು ಸೇರಿ ಅದನ್ನು ಮಾರುವ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ.

ಇನ್ನೇನು ಇವರ ಕೆಲಸ ಸುಗಮವಾಯಿತೆಂದು ಡಿಸೆಂಬರ್‌ 14ರಂದು ಹೆಲ್ಪರ್‌ ಸಹಾಯದಿಂದ ಗ್ಯಾಸ್‌ ಕಟ್ಟರ್‌ ತೆಗೆದುಕೊಂಡು ರೈಲು ಎಂಜಿನ್‌ನನ್ನು ಪೀಸ್‌ ಪೀಸ್‌ ಮಾಡಿದ್ದಾನೆ. ಇದನ್ನು ತಡೆಯಲು ಹೋದ ಸ್ಟೇಷನ್‌ ಅಧಿಕಾರಿಗಳಿಗೆ ನಕಲಿ ದಾಖಲೆಗಳನ್ನು ತೋರಿಸಿ. ಮೇಲಧಿಕಾರಿಗಳಿಂದ ನನಗೆ ಆದೇಶ ಬಂದಿದೆ ಅವರ ಆದೇಶದಿಂದಲೇ ನಾನು ಈ ಕೆಲಸ ಮಾಡ್ತಿದ್ದೀನಿ ಎಂದಿದ್ದಾನೆ. ಆದ್ರೂ ಇವರ ಮಾತನ್ನು ನಂಬದೆ ಸ್ಟೇಷನ್‌ ಮಾಸ್ಟರ್‌ಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ರೈಲ್ವೆ ಶೆಡ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಎಂಜಿನ್‌ ಹಳೆ ಸಾಮಾನು ಮಾರಾಟ ಜಾಲಕ್ಕೆ ಮಾರಿರುವುದಾಗಿ ಬೆಳಕಿಗೆ ಬಂದಿದೆ. ಕೂಡಲೇ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದಾಗ ಎಂಜಿನಿಯರ್‌ ವಿರುದ್ಧ ಕ್ರಮ ತೆಗೆದುಕೊಂಡು ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ.

Share Post