ಸಿದ್ದು ಕರೆಯದೆ ಸಭೆ ಆಯೋಜನೆ; ಡಿ.ಕೆ. ವಿರುದ್ಧ ಸಿಡಿಮಿಡಿಗೊಂಡ ವಿಪಕ್ಷ ನಾಯಕ
ಬೆಳಗಾವಿ: ನನಗೆ ತಿಳಿಸದೆ ಮೈಸೂರಿನಲ್ಲಿ ಸಭೆ ಮಾಡಲು ಯಾಕೆ ತೀರ್ಮಾನ ಮಾಡಿದ್ರಿ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಕಿಡಿ ಕಾರಿದ್ರು. ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 9ರಿಂದ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದೆ.
ಈ ಸಂಬಂಧ ಚರ್ಚೆಗೆ 23ರಂದು ಮೈಸೂರು-ಚಾಮರಾಜನಗರ ಭಾಗದಲ್ಲಿ ಸಭೆ ನಡೆಸಲು ಡಿ.ಕೆ.ಶಿವಕುಮಾರ್ ತೀರ್ಮಾನ ಮಾಡಿದ್ರು. ಇದು ಆ ಭಾಗದ ನಾಯಕರಿಗೆ ಸಮಾಧಾನವಿಲ್ಲದೆ ಆಕ್ಷೇಪಿಸಿದ್ರು. ಇವತ್ತು ಸದನಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಕರೆದು ಸಿದ್ದರಾಮಯ್ಯ ಅಲ್ಲಯ್ಯ..ನನ್ನ ಬಿಟ್ಟು ಸಭೆ ಯಾಕ್ ಮಾಡ್ತಿಯಾ? ಮೈಸೂರಿನಲ್ಲಿ ನಾನಿಲ್ಲದೆ ಯಾವುದೇ ಸಭೆ, ಸುದಿಗೋಷ್ಠಿ ಕರೆಯಬೇಡ ಎಂದು ಸಲಹೆ ನೀಡಿದ್ರು.
ಏನೇ ಮಾಡಿದ್ರು ಇಬ್ಬರೂ ಸೇರಿ ಮಾಡೋಣ. ನಾನು ನೀನು ಪ್ರತ್ಯೇಕವಾಗಿ ಸಬೆ ನಡೆಸಿದ್ರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುವುದರ ಜೊತೆಗೆ ಆಡಳಿತ ಪಕ್ಷಕ್ಕೆ ಬೆಟ್ಟು ಮಾಡಿ ತೋರಿಸಲು ಆಹಾರವಾಗುತ್ತೆ ಎಂದು ತಿಳಿಹೇಳಿದ್ರು.
ಬೇಕಾದ್ರೆ ನೀವು ಕೊಡಗು ಭಾಗದಲ್ಲಿ ಸಭೆ ನಡೆಸಿ ಆದ್ರೆ ಯಾವುದೇ ಕಾರಣಕ್ಕೂ ಮೈಸೂರಿನಲ್ಲಿ ಸಭೆ, ಸಮಾರಂಭ ಮಾಡದಂತೆ ತಾಕೀತು ಮಾಡಿದ್ರು. ಸಿದ್ದರಾಮಯ್ಯ ಮಾತಿಗೆ ಉತ್ತರ ನೀಡುತ್ತಾ ಹೋಗಲಿ ಬಿಡಿ ಸಾರ್ ನೀವಿಲ್ಲದೆ ಯಾವುದೇ ಸಭೆ ನಡೆಸಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ರು.