ಬೆಂಗಳೂರು ವಕೀಲರ ಸಂಘಕ್ಕೆ ವಿವೇಕ್ ರೆಡ್ಡಿ ಆಯ್ಕೆ
ಬೆಂಗಳೂರು: ಬೆಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ 1900ಕ್ಕೂ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ವಕೀಲರ ಸಂಘದ ಚುನಾವಣೆ ಫಲಿತಾಂಶ ತಡರಾತ್ರಿ ಪ್ರಕಟವಾಗಿದೆ. ವಿವೇಕ್ ರೆಡ್ಡಿಗೆ ಸ್ಪರ್ಧೆಯೊಡ್ಡಿದ ನಿಕಟಪೂರ್ವ ಅಧ್ಯಕ್ಷ ಎ.ಪಿ.ರಂಗನಾಥ್ 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ವಿವೇಕ್ ರೆಡ್ಡಿ ಪರವಾಗಿ 4804 ಮತಗಳ ಬಂದರೆ, ಎ.ಪಿ.ರಂಗನಾಥ್ ಗೆ 2894 ಮತಗಳು, ರಾಜಣ್ಣಗೆ 2545 ಮತಗಳು ಹಾಗೂ ಎಚ್.ಸಿ.ಶಿವರಾಮು ಪರವಾಗಿ 878 ಮತಗಳು ಚಲಾವಣೆಯಾಗಿವೆ.
ಬೆಂಗಳೂರು ವಕೀಲರ ಸಂಘ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ವಕೀಲರ ಸಂಘ ಎನಿಸಿದೆ. ಸಿಟಿ ಸಿವಿಲ್ ಕೋರ್ಟ್ ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ವಕೀಲರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸ್ಥಾನಗಳೊಂದಿಗೆ ಹೈಕೋರ್ಟ್ ನ 7, ಮೆಯೊಹಾಲ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಘಟಕಗಳ ತಲಾ 5 ಹಾಗೂ ಸಿಟಿ ಸಿವಿಲ್ ಕೋರ್ಟ್ ನ 12 ಕಾರ್ಯಕಾರಿ ಸದಸ್ಯ ಸಮಿತಿ ಸ್ಥಾನಗಳಿಗೂ ಚುನಾವಣೆ ನಡೆಯಿತು.
ಎಎಬಿ ಕಾರ್ಯಕಾರಿ ಸಮಿತಿ ನೂತನ ಸದಸ್ಯರು
ಹೈಕೋರ್ಟ್ ಘಟಕ
1) ಹೇಮಲತಾ ವಿ
2) ಅಮೃತೇಶ್ ಎನ್.ಪಿ
3) ಬಾಲಕೃಷ್ಣ ಬಿ
4) ಚಂದ್ರಕಾಂತ್ ಪಾಟೀಲ್ ಕೆ
5) ಹರೀಶ ಎ.ಎಸ್
6) ಚಾಮರಾಜ್ ಎಂ
6) ರಾಜು. ಎಸ್
ಸಿಟಿ ಸಿವಿಲ್ ಕೋರ್ಟ್ ಘಟಕ
1) ಅಕ್ಕಿ ಮಂಜುನಾಥ್ ಗೌಡ ಕೆ
2) ಮುನಿಯಪ್ಪ ಸಿ.ಆರ್ ಗೌಡ
3) ಶಶಿಕುಮಾರ್ ಆರ್. ಗೌಡ
4) ನಾರಾಯಣಸ್ವಾಮಿ ಜಿ
5) ಹರೀಶ್ ಎನ್.ವಿ
6) ಆಶಾ ಎಂ
7) ಶ್ರೀನಿವಾಸ ಗೌಡ ಆರ್.ವಿ
8) ದೇವರಾಜ ಕೆ
9) ಕುಮಾರ ಆರ್.ಎಸ್ ಗೌಡ
10) ಪುಟ್ಟರಾಜು ಎಚ್.ಬಿ
11) ಅಂಬರೀಶ್ ಕೆ.ಎನ್
12) ನಾಗರಾಜ ಜಿ
ಮ್ಯಾಜಿಸ್ಟ್ರೇಟ್ ಕೋರ್ಟ್ ಘಟಕ
1) ಪ್ರಭು ಕೆ.ಎಚ್
2) ಸತೀಶ
3) ಗಜೇಂದ್ರ ಸಿ
4) ರಘುನಾಥ ಗೌಡ ಎಸ್
5) ಲಿಂಗೇಗೌಡ ಡಿ.ಎಂ
ಮೇಯೋಹಾಲ್ ಕೋರ್ಟ್ ಘಟಕ
1) ಬ್ರಹ್ಮಾನಂದ ರೆಡ್ಡಿ ಬಿ.ಎ
2) ಭಕ್ತವತ್ಸಲ
3) ಗುಣಶೇಖರ್ ಡಿ
4) ಮುನಿರಾಜು ಎಸ್.ಎಂ
5) ಹರಿಹರ ವಿ