National

ಪದೇ ಪದೇ ಪ್ರಯಾಣಿಕರ ಟೀಕೆಗೆ ಗುರಿಯಾದ ಇಂಡಿಗೊ ಏರ್‌ಲೈನ್ಸ್

ರಾಜಮಂಡ್ರಿ:‌ ಇಂಡಿಗೊ ಏರ್‌ಲೈನ್ಸ್‌ ವಿರುದ್ಧ ಪ್ರತಿದಿನ ಒಂದಲ್ಲಾ ಒಂದು ನಿರ್ಲಕ್ಷ್ಯದ ಸುದ್ದಿ ವರದಿಯಾಗುತ್ತಲೇ ಇದೆ. ಇಂಡಿಗೊ ವಿಮಾನ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಗಾಯಕಿ ವಾಣಿ ಶ್ರೀವಾಣಿ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಇಂದು ರಾಜಮಂಡ್ರಿಯಲ್ಲಿ ಯಾವುದೋ ಒಂದು ಕಾರ್ಯಕ್ರಮಕ್ಕೆ ಹಾಜರಾಗಲು ತಂಡದ ಸಮೇತ ವಿಮಾನ ನಿಲ್ದಾಣದಲ್ಲಿ ಇಳಿದ ಗಾಯಕಿಗೆ ಶಾಕ್‌ ಕಾದಿತ್ತು. ಬ್ಯಾಗೇಜ್‌ ಕೌಂಟರ್‌ ಬಂದ ಕೂಡಲೇ ಮೇಡಂ ನಿಮ್ಮ ಲಗೇಜ್‌ ಬಂದಿಲ್ಲ ಲಗೇಜ್‌ ಬರುವವರೆಗೂ ನೀವು ಕಾಯಿರಿ ಎಂದು ವಿಮಾನ ಸಿಬ್ಬಂದಿ ಉತ್ತರಿಸಿದ ಕೂಡಲೇ ಗಾಯಕಿ ಶ್ರೀವಾಣಿಯವರು ಗರಂ ಆಗಿದ್ದಾರೆ. ನಾವು ಇಲ್ಲಿ ಕಾರ್ಯಕ್ರಮಕ್ಕಾಗಿ ಬಂದಿದ್ದೇವೆ ಅದಕ್ಕೆ ಬೇಕಿರುವ ಎಲ್ಲಾ ವಸ್ತುಗಳು ಬ್ಯಾಗ್‌ನಲ್ಲಿವೆ. ಈಗ ಬ್ಯಾಗ್‌ ಇಲ್ಲ ಅಂದ್ರೆ ನಾವು ಶೋ ಹೇಗೆ ನಡೆಸಬೇಕು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಲಗೇಜ್‌ ಹೆಚ್ಚಾಗಿದೆ ಎಂದು ಹೆಚ್ಚುವರಿ ಹಣ ಕೂಡ ಪಡೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಈ ಬಗ್ಗೆ ವಿಮಾನ ಸಿಬ್ಬಂದಿ ಹೇಳೋದೆ ಬೇರೆ, ನೀವು ಬಂದಿರುವ ವಿಮಾನದಲ್ಲಿ ಜಾಗ ಇರಲಿಲ್ಲ ಹಾಗಾಗಿ ಬೇರೊಂದು ವಿಮಾನದಲ್ಲಿ ನಿಮ್ಮ ಲಗೇಜ್‌ ಬರುತ್ತದೆ ಅಂತಾರೆ. ಆದ್ರೆ ಅಲ್ಲಿವರೆಗು ನಾವು ಶೋ ನಡೆಸದೆ ಹಾಗೆ ಇರಬೇಕಾ..? ನಮ್ಮ ಪ್ರೊಪೆಷನ್‌ ನಾವು ಜವಾಬ್ದಾರಿಯಿಂದ ನಡೆಸೋದು ಬೇಡ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ನಟಿ ರೋಜಾ ಕೂಡ ಈ ಇಂಡಿಗೊ ವಿಮಾನ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ರು.

Share Post