Districts

ಬೆಳಗಾವಿ ಘಟನೆಗೆ ಎಂಇಎಸ್‌ ಕಾರಣವಲ್ಲ; ಶಾಸಕ ಅನಿಲ್‌ ಬೆನಕೆ

ಬೆಳಗಾವಿ: ಕಳೆದ ರಾತ್ರಿ ಎಂಇಎಸ್‌ ಪುಂಡರು ನಡೆಸಿದ ದಾಂದಲೆ ಬಗ್ಗೆ ಬೆಳಗಾವಿ ಉತ್ತರ ಶಾಸಕ ಅನಿಲ್‌ ಬೆನಕೆ ಹೇಳೊದೇ ಬೇರೆ. ಪೊಲೀಸರು ಎಂಇಎಸ್‌ ಪುಂಡರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದರೂ, ಬೆಳಗಾವಿಯಲ್ಲಿ ದಾಂದಲೆ ನಡೆಸಿದ್ದು ಎಂಇಎಸ್‌ ಕಾರ್ಯಕರ್ತರೇ ಅಲ್ಲ ಅನ್ನೋದು ಶಾಸಕ ಅನಿಲ್‌ ಬೆನಕೆಯವರ ಉತ್ತರ.

ಮಾಧ್ಯಮಗಳ ಜೊತೆ ಮಾತನಾಡಿರುವ ಶಾಸಕ ಅನಿಲ್‌ ಬೆನಕೆ ಅವರು, ನಿನ್ನೆಯ ಘಟನೆಗೂ ಎಂಇಎಸ್‌ಗೂ ಸಂಬಂಧವೇ ಇಲ್ಲ. ನನಗೆ ಮಾಹಿತಿ ಇರುವ ಪ್ರಕಾರ ಎಂಇಎಸ್‌ ಕಾರ್ಯಕರ್ತರು ಈ ಕೃತ್ಯ ಎಸಗಿಲ್ಲ ಎಂದು ತನಿಖೆಗೆ ಮೊದಲೇ ಎಂಇಎಸ್‌ ಕಾರ್ಯಕರ್ತರಿಗೆ ಶಾಸಕರು ಕ್ಲೀನ್‌ ಚಿಟ್‌ ನೀಡಿದ್ದಾರೆ.

ನನಗೆ ಇದುವರೆಗೆ ಬಂದ ಮಾಹಿತಿ ಪ್ರಕಾರ ಎಂಇಎಸ್‌ ಕಾರ್ಯಕರ್ತರು ಯಾರೂ ಕಲ್ಲು ತೂರಾಟ ನಡೆಸಿಲ್ಲ. ರಾತ್ರಿ ನಡೆದ ಘಟನೆಗೆ ಎಂಇಎಸ್‌ ಕಾರಣವಲ್ಲ.  ಎಂಇಎಸ್‌ ಕಾರ್ಯಕರ್ತರು ದಾಂದಲೆ ನಡೆಸಿದ್ದಾರೆ ಎಂಬುದಕ್ಕೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ಎಂಇಎಸ್‌ ಕಾರ್ಯಕರ್ತರೇ ಈ ಕೃತ್ಯ ಎಸಗಿದ್ದಾರೆ ಎಂದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಅನಿಲ್‌ ಬೆನಕೆ ಹೇಳಿದ್ದಾರೆ.

Share Post