ಇರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ!
ನವದೆಹಲಿ; ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇದಕ್ಕೆ ಇಸ್ರೇಲ್ ಖಾರವಾಗಿ ಪ್ರತಿಕ್ರಿಯಿಸಿದೆ.. ಶುಕ್ರವಾರ ಮಧ್ಯರಾತ್ರಿ 100ಕ್ಕೂ ಹೆಚ್ಚು ಯುದ್ಧ ವಿಮಾನಗಳ ಮೂಲಕ ಇರಾನ್ ಮೇಲೆ ದಾಳಿ ನಡೆಸಲಾಗಿದ್ದು, ಇರಾನ್ನ 20ಕ್ಕೂ ಹೆಚ್ಚು ಮಿಲಿಟರಿ ಸ್ಥಳಗಳ ಮೇಲೆ ದಾಳಿ ಮಾಡಿದೆ..
ಅಕ್ಟೋಬರ್ 1ರಂದು ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.. ಈ ವೇಳೆ ಪ್ರತಿಕ್ರಿಯಿಸಿದ್ದ ಇಸ್ರೇಲ್ ಇದಕ್ಕೆ ಪ್ರತಿಕ್ರಿಯೆ ಕೊಡೋದಾಗಿ ಹೇಳಿತ್ತು.. ಅದರಂತೆ ಇಸ್ರೇಲ್ ದಾಳಿ ನಡೆಸಿದೆ.. ಇರಾನ್ ವಿರುದ್ಧ ಇಸ್ರೇಲ್ ದಾಳಿ ಪ್ರಾರಂಭಿಸಿದಾಗ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಟೆಲ್ ಅವಿವ್ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯಲ್ಲಿದ್ದರು ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ.
ಟೆಹ್ರಾನ್ನಲ್ಲಿ ಮತ್ತು ಕರಾಜ್ ನಗರ ಸೇರಿದಂತೆ ಹತ್ತಿರದ ಮಿಲಿಟರಿ ನೆಲೆಗಳಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. ರಾತ್ರಿ 2 ಗಂಟೆಯ ನಂತರ ದಾಳಿಗಳು ಪ್ರಾರಂಭವಾದವು. ಮೂರು ಅಲೆಗಳ ದಾಳಿಯನ್ನು ನಡೆಸಲಾಯಿತು.