BengaluruLifestyle

ಮುಳುಗಡೆ ಪ್ರದೇಶಕ್ಕೆ ಸಂಸದ ಸುಧಾಕರ್ ಭೇಟಿ

ಬೆಂಗಳೂರು; ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಪ್ರದೇಶಗಳು ಜಾಲವೃತವಾಗಿವೆ.. ಈ ಹಿನ್ನೆಲೆಯಲ್ಲಿ ಸಂಸದ ಡಾ. ಕೆ. ಸುಧಾಕರ್ ಸ್ಥಳ ಪರಿಶೀಲನೆ ನಡೆಸಿದರು..

ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ..

ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಲಾವೃತವಾಗಿರುವ ಯಲಹಂಕದ ಕೇಂದ್ರೀಯ ವಿಹಾರ ವಸತಿ ಸಮುಚ್ಛಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

NDRF ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ತಂಡಗಳಿಂದ ಅಪಾರ್ಟ್ಮೆಂಟ್ ನಿವಾಸಿಗಳನ್ನ ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಈ  ಅಪಾರ್ಟ್ಮೆಂಟ್ ನಲ್ಲಿ ಪದೇ ಪದೇ ಮರುಕಳಿಸುತ್ತಿರುವ ಸಮಸ್ಯೆಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.

ಐಟಿ-ಬಿಟಿ ರಾಜಧಾನಿಯಾಗಿ ಬೆಂಗಳೂರು ನಗರ ಇವತ್ತು ಬಹಳ ವೇಗವಾಗಿ ಬೆಳೆಯುತ್ತಿದ್ದು, ನಗರ ಬೆಳೆಯುತ್ತಿದ್ದಂತೆ, ನಗರದ ಸಮಸ್ಯೆಗಳೂ ಸಹ ಬೆಳೆಯುತ್ತಿವೆ.

ನಾಡಪ್ರಭು ಕೆಂಪೇಗೌಡರು ಕಟ್ಟಿದ ನಮ್ಮ ಹೆಮ್ಮೆಯ ಬೆಂಗಳೂರನ್ನ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು, ಅನಿವಾರ್ಯತೆಯೂ ಹೌದು.

ಕೆರೆಗಳು ಮತ್ತು ರಾಜಕಾಲುವೆಗಳ ಅಕ್ರಮ ಒತ್ತುವರಿ, ಕಾನೂನು ಮತ್ತು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡಗಳಿಗೆ ಅನುಮತಿ ನೀಡುವುದು, ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವುದು – ಇವೇ ಇಂದಿನ ಪರಿಸ್ಥಿತಿಗೆ ಮೂಲ ಕಾರಣಗಳು.

ಬೆಂಗಳೂರಿನ ಶೋಚನೀಯ ಮೂಲಸೌಕರ್ಯದ ಪರಿಸ್ಥಿತಿ ಈಗಾಗಲೇ ನಮ್ಮನ್ನ ತಲೆ ತಗ್ಗಿಸುವಂತೆ ಮಾಡಿದೆ.

ಈಗಲಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು, ಒಗ್ಗಟ್ಟಿನಿಂದ ನಮ್ಮ ನಗರವನ್ನು ಉಳಿಸಿಕೊಳ್ಳುವ, ಸರಿಪಡಿಸಿಕೊಳ್ಳುವ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಕೈಮೀರಿ ಹೋಗುತ್ತದೆ.

ಇದರ ಜೊತೆಗೆ ಹವಾಮಾನ ಬದಲಾವಣೆಯ ಭಯಂಕರ ಲಕ್ಷಣಗಳೂ ಸಹ ಗೋಚರಿಸಲು ಆರಂಭವಾಗಿವೆ. ಅಕ್ಟೋಬರ್ ಅಂತ್ಯದಲ್ಲಿ ಇಂತಹ ಭಾರಿ ಮಳೆ ಸುರಿಯುವುದು ಅಂದರೆ ಅದು climate change ಪ್ರಭಾವವೆ ಆಗಿದೆ.

ಮುಂದೆ ಇಂತಹ ಪರಿಸ್ಥಿತಿ ಮರುಕಳಿಸದಿರಲು, ನಮ್ಮ ಹೆಮ್ಮೆಯ ಬೆಂಗಳೂರನ್ನ ಉಳಿಸಿಕೊಳ್ಳಲು ಪಕ್ಷಾತೀತವಾಗಿ ಒಗ್ಗೂಡೋಣ. ಜವಾಬ್ದಾರಿಯುತ ನಾಗರೀಕರಾಗೋಣ.

Share Post