CrimeNational

ನಾಯಿ ಓಡಿಸಲು ಹೋಗಿ ಆಯತಪ್ಪಿ ಬಿದ್ದು ಯುವಕ ಸಾವು!

ಹೈದರಾಬಾದ್‌; ಹೋಟೆಲ್‌ನ ಮೂರನೇ ಮಹಡಿಯಲ್ಲಿ ನಾಯಿಯನ್ನು ಓಡಿಸಲು ಹೋಗಿ ಆಯತಪ್ಪಿ ಬಿದ್ದು ಯುವನೊಬ್ಬ ಸಾವನ್ನಪ್ಪಿದ್ದಾರೆ.. ಹೈದರಾಬಾದ್‌ ನಗರದ ವಿವಿ ಪ್ರೈಡ್‌ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.. ಹೋಟೆಲ್‌ನ ಮೂರನೇ ಮಹಡಿಯ ಕಿಟಕಿಯಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..
22 ವರ್ಷದ ಉದಯ್‌ಕುಮಾರ್‌ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.. ಉದಯ್‌ ಕುಮಾರ್‌ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ.. ಈ ವೇಳೆ ಹೋಟೆಲ್‌ ರೂಮ್‌ ಒಳಗೆ ನಾಯಿ ಬಂದಿದ್ದು, ಅದನ್ನು ಓಡಿಸಲು ಹೋದಾಗ ಆಯತಪ್ಪಿ ಕಿಟಕಿಯಿಂದ ಜಾರಿ ಕೆಳಗೆ ಬಿದ್ದಿದ್ದಾರೆ.. ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದರಿಂದ ಉದಯ್‌ ಕುಮಾರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..
ಉದಯಕುಮಾರ್‌ ಬೀಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.. ಈ ದೃಶ್ಯಗಳನ್ನು @sudhakarudumula ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ..

 

Share Post