ಮಾರುಕಟ್ಟೆಗೆ ಲಗ್ಗೆಯಿಟ್ಟ ಇ-ಬೈಕ್, ಬೆಲೆ ಎಷ್ಟು ಗೊತ್ತಾ?
ನವದೆಹಲಿ: ಓಲಾ ಸಂಸ್ಥೆ ಇ-ಬೈಕ್ ಬಿಡುಗಡೆ ಮಾಡಿದ ಕೆಲವೇ ತಿಂಗಳ ಅಂತರದಲ್ಲಿ ಬೈಕ್ ರೈಡ್ ಸೇವಾ ಸಂಸ್ಥೆ ಬೌನ್ಸ್ ಕೂಡ ತನ್ನ ಅಗ್ಗದ ಬೆಲೆಯ ಇ-ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬೌನ್ಸ್ ಸಂಸ್ಥೆ ತನ್ನ ಮೊದಲ ಗ್ರಾಹಕ ಎಲೆಕ್ಟ್ರಿಕ್ ಸ್ಕೂಟರ್, ಬೌನ್ಸ್ ಇನ್ಫಿನಿಟಿ E1 ಅನ್ನು ಅನಾವರಣಗೊಳಿಸಿದ್ದು, ಈ ಬೈಕ್ ನ ಬ್ಯಾಟರಿ ಮತ್ತು ಚಾರ್ಜರ್ ಸೇರಿದಂತೆ ಇದರ ಬೆಲೆ ರೂ 68,999 ರೂ ಮತ್ತು ಬೌನ್ಸ್ ಇನ್ಫಿನಿಟಿ E1 ಅನ್ನು ‘ಬ್ಯಾಟರಿ ಆಸ್ ಎ ಸರ್ವಿಸ್’ ಆಯ್ಕೆಯೊಂದಿಗೆ ನೀಡಲಾಗುವುದು.. ಈ ಮಾದರಿಯ ಬೆಲೆ 45,099 ರೂ. ಇರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.ಅಂತೆಯೇ ಬೌನ್ಸ್ನ ವಿಸ್ತಾರವಾದ ಸ್ವಾಪಿಂಗ್ ನೆಟ್ವರ್ಕ್ನಿಂದ ಸಂಪೂರ್ಣ ಚಾರ್ಜ್ ಆಗಿರುವ ಬ್ಯಾಟರಿಯೊಂದಿಗೆ ಖಾಲಿ ಬ್ಯಾಟರಿಯನ್ನು ವಿನಿಮಯ ಮಾಡಿಕೊಂಡಾಗಲೆಲ್ಲಾ ಗ್ರಾಹಕರು ಬ್ಯಾಟರಿ ವಿನಿಮಯಕ್ಕಾಗಿ ಪಾವತಿಸಬಹುದು. ಪ್ರಮುಖ ಪಾಲುದಾರಿಕೆಗಳ ಮೂಲಕ ಬೌನ್ಸ್ ವ್ಯಾಪಕವಾದ ಬ್ಯಾಟರಿ-ಸ್ವಾಪಿಂಗ್ ನೆಟ್ವರ್ಕ್ ಅನ್ನು ಸ್ಥಾಪಿಸುತ್ತಿದೆ, ಇದು ತನ್ನ ಚಿಲ್ಲರೆ ಗ್ರಾಹಕರು ಮತ್ತು ಅದರ ಸವಾರಿ-ಹಂಚಿಕೆ ವ್ಯವಹಾರ ಎರಡಕ್ಕೂ ಸೇವೆ ಸಲ್ಲಿಸುತ್ತದೆ. ಕ್ಲೀನ್ ಮೊಬಿಲಿಟಿಗೆ ಭಾರತದ ಪರಿವರ್ತನೆಯನ್ನು ಬೆಂಬಲಿಸಲು ವಿಶ್ವದ ಅತಿದೊಡ್ಡ ಮತ್ತು ದಟ್ಟವಾದ ಬ್ಯಾಟರಿ ವಿನಿಮಯ ವೇದಿಕೆಯನ್ನು ನಿರ್ಮಿಸುವುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ.