CrimeDistricts

ಕಾಲೇಜು ಕಟ್ಟಡದಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ದುರ್ಮರಣ!

ಚಿಕ್ಕೋಡಿ; ವಸತಿ ಸಹಿತ ಕಾಲೇಜಿನ ಮೊದಲ ಮಹಡಿಯಿಂದ ಆಯತಪ್ಪಿಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಪಿಯುಸಿ ವಿದ್ಯಾರ್ಥಿನಿ 17 ವರ್ಷದ ಆಫ್ರೀನ್‌ ಜಮಾದಾರ್‌ ಎಂಬಾಕೆಯೇ ಸಾವನ್ನಪ್ಪಿದ ವಿದ್ಯಾರ್ಥಿನಿಯಾಗಿದ್ದಾಳೆ..
ನಿನ್ನೆ ರಾತ್ರಿ ಆಫ್ರೀನ್‌ ಜಮಾದಾರ್‌ ಅವರು ವಸತಿ ಶಾಲೆಯಲ್ಲಿ ಮೊದಲ ಮಹಡಿಯಲ್ಲಿ ಕುಳಿತು ಓದುತ್ತಿದ್ದಳು.. ಈ ವೇಳೆ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾಳೆ.. ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ.. ಮೃತ ವಿದ್ಯಾರ್ಥಿನಿ ಗೋಕಾಕ್‌ ತಾಲ್ಲೂಕಿನ ಶಿಂದಿ ಕುರಬೇಟ್‌ ಗ್ರಾಮದವರು ಎಂದು ತಿಳಿದುಬಂದಿದೆ.. ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದೆ.. ಮಧ್ಯರಾತ್ರಿ ಹೊರಭಾಗದಲ್ಲಿ ಓದಲು ಸಾಧ್ಯವೇ..? ಎಂಬುದರ ಬಗ್ಗೆಯೂ ಅನುಮಾನ ಇದೆ.. ಹೀಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..
ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.. ಪೊಲೀಸರು ಸಾವಿನ ಹಿಂದಿನ ರಹಸ್ಯದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.. ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ..? ಇಲ್ಲವೇ ಬೇರೆ ಏನಾದರೂ ಆಗಿದೆಯೇ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ..

Share Post