CrimeNational

ಉಗ್ರರ ಗುಂಡಿನ ದಾಳಿ; ವೈದ್ಯ ಸೇರಿ ಏಳು ಮಂದಿ ದುರ್ಮರಣ!

ಜಮ್ಮು-ಕಾಶ್ಮೀರ; ಜಮ್ಮು-ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರೆದಿದೆ.. ಗಂದರ್‌ಬಾಲ್‌ ಜಿಲ್ಲೆಯ ಗುಂಡ್‌ ಪ್ರದೇಶದ ಗಗಂಗೀರ್‌ನಲ್ಲಿದ ಝಡ್‌ ಮೋಡ್‌ ಸುರಂಗದ ಕ್ಯಾಂಪ್‌ ಸೈಟ್‌ ಬಳಿ ಈ ಘಟನೆ ನಡೆದಿದೆ.. ಉಗ್ರರ ದಾಳಿ ಹಿನ್ನೆಲೆಯಲ್ಲಿ ವೈದ್ಯ ಹಾಗೂ 7 ಮಂದಿಯನ್ನು ಹತ್ಯೆ ಮಾಡಲಾಗಿದೆ..
ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.. ಅಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.. ಕಾರ್ಮಿಕರನ್ನು ಟಾರ್ಗೆಟ್‌ ಮಾಡಿದ್ದ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.. ಇದೇ ವೇಳೆ ಒಬ್ಬರು ವೈದ್ಯರು ಕೂಡಾ ಹತ್ಯೆಯಾಗಿದ್ದಾರೆ.. ಡಾ.ಶಹನವಾಜ್ ಹತ್ಯೆಯಾದ ವೈದ್ಯ.. ಇನ್ನು ಫಹೀಮ್ ನಜೀರ್, ಕಲೀಂ, ಮೊಹಮ್ಮದ್ ಹನೀಫ್, ಶಶಿ ಅಬ್ರೋಲ್, ಅನಿಲ್ ಶುಕ್ಲಾ ಮತ್ತು ಗುರ್ಮೀತ್ ಸಿಂಗ್ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ..
ಇನ್ನೂ ಹೆಚ್ಚಿನ ಅನಾಹುತ ಆಗುವ ಸಂಭವವಿತ್ತು,.. ಆದ್ರೆ ಪೊಲೀಸರು ಹಾಗೂ ಭದ್ರತಾ ಪಡೆಗಳು ಕೂಡಲೇ ಆ ಪ್ರದೇಶವನ್ನು ಸುತ್ತುವರೆದಿದ್ದು, ಉಳಿದ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.. ದುಷ್ಕರ್ಮಿಗಳು ದಾಳಿಗೊಳಗಾದ ಕಾರ್ಮಿಕರು ಝಡ್ ಮೋರ್ಹ್ ಸುರಂಗದಲ್ಲಿ ಕೆಲಸ ಮಾಡುವ ತಂಡದ ಭಾಗವಾಗಿದ್ದರು. ಈ ಸುರಂಗ ಮಾರ್ಗವು ಗಗನೀರ್ ನಿಂದ ಮಧ್ಯ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್‌ಗೆ ಸಂಪರ್ಕಿಸುತ್ತದೆ.

Share Post