CrimeDistricts

ವಿದ್ಯಾರ್ಥಿನಿಯರಿಗೆ ಬಿಯರ್‌ ಕುಡಿಸಿ ಉಪನ್ಯಾಸಕರಿಂದ ಕಿರುಕುಳ ಆರೋಪ

ಕೊಡಗು; ಶಿಕ್ಷಕ ಅಂದ್ರೆ ದೇವರಿಗೆ ಸಮಾನ ಅನ್ನೋ ಮಾತೊಂದಿತ್ತು.. ಆದ್ರೆ ಈಗ ಶಿಕ್ಷಕರೇ ಭಕ್ಷಕರಾಗುತ್ತಿದ್ದಾರೆ.. ವಿದ್ಯಾರ್ಥಿನಿಯರ ಪಾಲಿಗೆ ಕೆಲ ಶಿಕ್ಷಕರು ರಾಕ್ಷಸರಾಗಿ ಕಾಣುತ್ತಿದ್ದಾರೆ.. ಇದಕ್ಕೊಂದು ಉದಾಹರಣೆ ಈ ಸುದ್ದಿ.. ಕೊಡಗಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಬಿಯರ್‌ ಕುಡಿಸಿ ಉಪನ್ಯಾಸಕರು ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.. ಈ ಸಂಬಂಧ ವಿದ್ಯಾರ್ಥಿನಿಯರೇ ಪೊಲೀಸರಿಗೆ ದೂರು ನೀಡಿದ್ದಾರೆ..
ರಾಮನಗರ ಜಿಲ್ಲೆ ಕನಕಪುರ ಪಟ್ಟಣದ ಪಿಯು ಕಾಲೇಜೊಂದರ ವಿದ್ಯಾರ್ಥಿನಿಯರನ್ನು ಅಕ್ಟೋಬರ್‌ 5 ರಿಂದ 10ರವರೆಗೆ ಕೊಡಗು ಪ್ರವಾಸ ಕರೆದುಕೊಂಡು ಹೋಗಲಾಗಿತ್ತು.. ಈ ವೇಳೆ ಮೂವರು ವಿದ್ಯಾರ್ಥಿನಿಯರನ್ನು ಕೂಡಿ ಹಾಕಿ ಮದ್ಯ ಕುಡಿಸಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.. ಮೂವರು ಉಪನ್ಯಾಸಕರ ವಿರುದ್ಧ ದೂರು ನೀಡಲಾಗಿದೆ.
ಅಕ್ಟೋಬರ್‌ 10ರಂದು ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.. ಘಟನೆ ಬಗ್ಗೆ ವಿದ್ಯಾರ್ಥಿನಿಯರು ಅಧ್ಯಾಪಕಿಯರಿಗೆ ತಿಳಿಸಿದ್ದರಂತೆ.. ಆದ್ರೆ ಅವರು ಇದೆಲ್ಲಾ ಕಾಮನ್‌ ಎಂದು ಹೇಳಿದ್ದರಂತೆ.. ಈ ಹಿನ್ನೆಯಲ್ಲಿ ವಿದ್ಯಾರ್ಥಿನಿಯರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.. ಇನ್ನು ಮಕ್ಕಳು ಹಕ್ಕು ಆಯೋಗ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಏಳು ದಿನದಲ್ಲಿ ವರದಿ ನೀಡುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದೆ..

Share Post