CrimeNational

ಮಧ್ಯರಾತ್ರಿ ಆಟೋ ಹತ್ತಿದ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ!

ಹೈದರಾಬಾದ್; ಮುಂಜಾನೆ ಆಟೋ ಹತ್ತಿದ 29 ವರ್ಷದ ಮಹಿಳೆ ಮೇಲೆ ಆಟೋ ಚಾಲಕ ಅತ್ಯಾಚಾರ ಎಸಗಿದ್ದಾನೆ.. ಹೈದರಾಬಾದ್‌ ನಗರದ ಗಚಿಬೌಲಿ ಮಸೀದಿ ಬಂದಾ ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ.. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ..
ಖಾಸಗಿ ಕಂಪನಿ ಉದ್ಯೋಗಿಯಾಗಿರುವ 29 ವರ್ಷದ ಮಹಿಳೆ ಚೆನ್ನೈಗೆ ಹೋಗಿದ್ದು, ಅಲ್ಲಿಂದ ಹೈದರಾಬಾದ್‌ಗೆ ವಾಪಸ್ಸಾಗಿದ್ದರು.. ಲಿಂಗಂಪಲ್ಲಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಮಧ್ಯರಾತ್ರಿ 2.15ಕ್ಕೆ ನಾನಕ್‌ ರಾಮ್‌ ಗುಡಕ್ಕೆ ಆಟೋ ಹತ್ತಿದ್ದಾರೆ.. ಅರ್ಧದಾರಿಯಲ್ಲಿ ಆಟೋ ಚಾಲಕ ಆಕೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ..
ಅಮೀರ್‌ಪೇಟ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಆ ಮಹಿಳೆ ಕೆಲಸ ಮಾಡುತ್ತಾರೆ.. ಆಟೋ ಚಾಲಕನ ತನ್ನನ್ನು ಬೆದರಿಸಿದಾಗ ನಾನು ಪೊಲೀಸರಿಗೆ ಕರೆ ಮಾಡಲು ಯತ್ನಿಸಿದೆ.. ಕತ್ತು ಹಿಸುಕಲು ಆಟೋ ಚಾಲಕ ಯತ್ನಿಸಿದ. ನಂತರ ನನ್ನ ಬಳಿ ಇದ್ದ ಹಣ ಹಾಗೂ ಗುರುತಿನ ಚೀಟಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.. ದಾರಿಯಲ್ಲಿ ಜನ ಕಂಡಾಗ ಆತ ಅಲ್ಲಿಂದ ಎಸ್ಕೇಪ್‌ ಆದ ಎಂದು ಮಹಿಳೆ ಯುವತಿ ದೂರಿನಲ್ಲಿ ಹೇಳಿದ್ದಾರೆ.. ಸಂತ್ರಸ್ತೆ 100ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದು, ಆಟೋ ರಿಕ್ಷಾಗೆ ನಂಬರ್‌ ಪ್ಲೇಟ್‌ ಇಲ್ಲ ಎಂದು ಹೇಳಿದ್ದಾರೆ..

 

Share Post