HealthLifestyleNational

ರೈಲಿನಿಂದ ಕೆಳಗೆ ಬಿದ್ದ ಮಗು; ಮಗಳಿಗಾಗಿ 16 ಕಿಮೀ ಓಡಿದ ತಂದೆ!

ಲಖನೌ; ಚಲಿಸುತ್ತಿದ್ದ ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಬಾಲಕಿಯೊಬ್ಬಳು ಹೊರಗೆ ಬಿದ್ದಿದ್ದು, ರೈಲು ನಿಲ್ಲಿಸಿದ ಅಪ್ಪ ಸುಮಾರು 16 ಕಿಲೋಮೀಟರ್‌ ಓಡಿ ಮಗಳು ಬಿದ್ದ ಜಾಗವನ್ನು ಪತ್ತೆ ಮಾಡಿ ಆಕೆಯನ್ನು ರಕ್ಷಣೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.. ಅದೂ ಕೂಡಾ ರಾತ್ರಿಯ ಕಗ್ಗತ್ತಲಲ್ಲಿ ಮಗಳನ್ನು ಉಳಿಸಿಕೊಳ್ಳಲು ಅಪ್ಪ ಸುಮಾರು 16 ಕಿಲೋ ಮೀಟರ್‌ ಓಡಿದ್ದಾರೆ..
ಉತ್ತರ ಪ್ರದೇಶದ ಲಲಿತ್‌ಪುರ ರೈಲು ನಿಲ್ದಾಣಕ್ಕೆ ಕೊಂಚ ದೂರದಲ್ಲಿ ಈ ಘಟನೆ ನಡೆದಿದೆ.. ಮಥುರಾ ನಿವಾಸಿಯಾದ ಅರವಿಂದ್‌ ಎಂಬುವವರು ತಮ್ಮ ಪುಟ್ಟ ಮಗಳು ಗೌರಿಯೊಂದಿಗೆ ಕುರುಕ್ಷೇತ್ರಕ್ಕೆ ಹೋಗಿದ್ದರು.. ಅಲ್ಲಿಂದ ಅವರು ರೈಲಿನಲ್ಲಿ ಮಥುರಾಕ್ಕೆ ವಾಪಸ್ಸಾಗುತ್ತಿದ್ದರು.. ಎಮರ್ಜೆನ್ಸಿ ವಿಂಡೋ ಬಳಿ ತಮ್ಮ ಮಗಳು ಗೌರಿಯನ್ನು ಮಲಗಿಸಿದ್ದರು.. ಮುಂದಿನ ನಿಲ್ದಾಣದಲ್ಲಿ ರೈಲು ಹತ್ತಿದ ಪ್ರಯಾಣಿಕರೊಬ್ಬರು ಗಾಳಳಿ ಬರಲಿ ಎಂದು ತುತ್ತು ಕಿಟಕಿ ಓಪನ್‌ ಮಾಡಿದ್ದಾರೆ.. ಈ ವೇಳೆ ಮಲಗಿದ್ದ ಬಾಲಕಿ ಗೌರಿ ಜಾರಿ ಕಿಟಕಿ ಮೂಲಕ ಹೊರಗೆ ಬಿದ್ದಿದ್ದಾಳೆ..
ಈ ದೃಶ್ಯವನ್ನು ಸ್ವತಃ ನೋಡಿದ ಅಪ್ಪ ಅರವಿಂದ್‌ಗೆ ಎದೆಯೇ ಒಡೆದಂತಾಗಿದೆ.. ಕೂಡಲೇ ಅವರು ಚೈನ್‌ ಎಳೆದು ರೈಲು ನಿಲ್ಲಿಸಿದ್ದಾರೆ.. ನಂತರ 112ಕ್ಕೆ ಕರೆ ಮಾಡಿ ಸಹಾಯ ಕೋರಿದ್ದಾರೆ.. ರೈಲು ನಿಲ್ಲುವ ವೇಳೆಗೆ ಅದು 16 ಕಿಲೋ ಮೀಟರ್‌ ಮುಂದೆ ಬಂದಿತ್ತು.. ಆದರೂ ಕೂಡಾ ಅಪ್ಪ ಅರವಿಂದ್‌ ಮಗಳಿಗಾಗಿ ಟ್ರ್ಯಾಕ್‌ನಲ್ಲೇ ಸುಮಾರು 16 ಕಿಲೋ ಮೀಟರ್‌ ಓಡಿದ್ದಾರೆ.. ಇನ್ನು ಪೊಲೀಸರು, ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ ಕೂಡಾ ಅವರ ಬೆಂಬಲಕ್ಕೆ ನಿಂತಿದೆ.. ಎರಡು ಟೀಮ್‌ಗಳು ವಾಹನದಲ್ಲಿ ಹುಡುಕಾಟ ನಡೆಸುತ್ತಿದ್ದರೆ, ತಂದೆ ಅರವಿಂದ್‌ ಮಾತ್ರ ವಾಹನ ಹತ್ತದೇ ಟ್ರ್ಯಾಕ್‌ನಲ್ಲೇ ಸುಮಾರು 16 ಕಿಲೋ ಮೀಟರ್‌ ಓಡಿದ್ದಾರೆ.. ಪೊಲೀಸರಿಗಿಂತಲೂ ಮುಂಚೆಯೇ ವಿರಾರಿ ಸ್ಟೇಷನ್‌ ಬಳಿ ಧಾವಿಸಿದ್ದಾರೆ.. ಹತ್ತಿರದ ಪ್ರದೇಶದ ಪೊದೆಯೊಂದರಲ್ಲಿ ಮಗು ಬಿದ್ದಿದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ..
ರೈಲಿನಿಂದ ಬಿದ್ದಿದ್ದರಿಂದ ಮಗು ಗೌರಿ ಪ್ರಜ್ಞೆ ತಪ್ಪಿದ್ದಳು.. ತಂದೆ ಅರವಿಂದ್‌ ಆಕೆಯನ್ನು ಬಿಗಿದಪ್ಪಿಕೊಂಡು ಓಡಿಬಂದಿದ್ದಾರೆ.. ನಂತರ ಪೊಲೀಸರು ಮಗುವನ್ನು ಲಲಿತ್‌ಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಸದ್ಯ ಮಗು ಚೇತರಿಸಿಕೊಳ್ಳುತ್ತಿದೆ.. ಆಕೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

Share Post