Uncategorized

ಅರ್ಜಿ ಸಲ್ಲಿಸಿದ 48 ವರ್ಷಗಳ ನಂತರ ಕೆಲಸ ಆಫರ್‌ ಲೆಟರ್‌!

ಇಂಗ್ಲೆಂಡ್‌; ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದರೆ ಈಗ ಒಂದೆರಡು ದಿನಗಳಲ್ಲಿ ರಿಸಲ್ಟ್‌ ಗೊತ್ತಾಗಿಬಿಡುತ್ತದೆ.. ಆದ್ರೆ ಇಲ್ಲಿ ಮಹಿಳೆಯೊಬ್ಬರು 48 ವರ್ಷಗಳ ಹಿಂದೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ.. ಆದ್ರೆ ಆತನಿಗೆ ಈಗ ಉದ್ಯೋಗದ ಆಫರ್‌ ಲೆಟರ್‌ ಬಂದಿದೆ.. ಅಚ್ಚರಿ ಆದರೂ ಸತ್ಯ.. ಸೋಷಿಯಲ್‌ ಮೀಡಿಯಾದಲ್ಲಿ ಇದರ ಫೋಟೋ ಹರಿದಾಡುತ್ತಿದ್ದು, ಹೆಚ್ಚು ಚರ್ಚೆಯಾಗುತ್ತಿದೆ..
ಇಂಗ್ಲೆಂಡ್‌ನ ಟಿಜ್ಜಿ ಹಾಡ್ಸ್‌ ಎಂಬುವವರು 22ನೇ ವಯಸ್ಸಿನಲ್ಲಿದ್ದಾಗ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು.. ಆದ್ರೆ ಈಗ ಅವರಿಗೆ 70 ವರ್ಷ.. ಈಗ ಅವರಿಗೆ ಅಂದು ಸಲ್ಲಿಸಿದ್ದ ಕಂಪನಿಯ ಆಫರ್‌ ಲೆಟರ್‌ ಬಂದು ತಲುಪಿದೆ.. ಟಿಜ್ಜಿ ಹಾಡ್ಸ್ ಸ್ಟಂಟ್ ವುಮನ್ ಆಗಲು ಬಯಸಿದ್ದರಂತೆ. 1976ರಲ್ಲಿ ಆ ಮಹಿಳೆ ಮೋಟಾರ್ ಸೈಕಲ್ ಸ್ಟಂಟ್ ರೈಡರ್ ಆಗಲು ಅದೇ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು.
ಆಗಲೇ ಆ ಕಂಪನಿ ಆಕೆಯನ್ನು ಸೆಲೆಕ್ಟ್‌ ಮಾಡಿತ್ತು.. ಆದ್ರೆ ಆಫರ್‌ ಲೆಟರ್‌ ಪೋಸ್ಟ್‌ ಆಫೀಸ್‌ನ ಪೋಸ್ಟ್‌ ಬಾಕ್ಸ್‌ನಲ್ಲಿ ಒಂದು ಕಡೆ ಅಂಟಿಕೊಂಡುಬಿಟ್ಟಿತ್ತು.. ಅದನ್ನು ಇಷ್ಟು ವರ್ಷಗಳವರೆಗೆ ಯಾರೂ ನೋಡಿಲ್ಲ.. ಇದೀಗ ಪೋಸ್ಟ್‌ ಸಿಬ್ಬಂದಿಗೆ ಅದು ಸಿಕ್ಕಿದ್ದು, ಈಗ ಆ ಲೆಟರ್‌ ತಲುಪಿಸಿದ್ದಾರೆ..

Share Post