CrimeNational

ಪ್ರೇಯಸಿ ಜೊತೆ ಲಾಂಗ್‌ ಡ್ರೈವ್‌ ಹೋಗಲು ಕಾರು ಕದ್ದ ಪ್ರಿಯಕರ!

ಲಕ್ನೋ; ಯುವಕನೊಬ್ಬ ಒಬ್ಬಳು ಯುವತಿಯನ್ನು ಪ್ರೀತಿಸುತ್ತಿದ್ದ.. ಆಕೆಯ ಜೊತೆ ಲಾಂಗ್‌ ಡ್ರೈವ್‌ ಹೋಗಲು ಬಯಸಿದ್ದರು.. ಆಕೆಯ ಇಚ್ಛೆಯೂ ಅದೇ ಆಗಿತ್ತು.. ಹೀಗಾಗಿ, ಪ್ರೇಯಸಿಯನ್ನು ಇನ್ನಷ್ಟು ಇಂಪ್ರೆಸ್‌ ಮಾಡಲು ಆತ ಕೂಡಾ ಹೇಗಾದರೂ ಪ್ರೇಯಸಿಯನ್ನು ಲಾಂಗ್‌ ಡ್ರೈವ್‌ ಕರೆದುಹೋಗಲು ಬಯಸಿದ್ದ.. ಆದ್ರೆ, ಆತನ ಬಳಿ ಕಾರು ಇರಲಿಲ್ಲ.. ಹೀಗಾಗಿ ಪ್ರೇಯಸಿ ಮನವೊಲಿಸುವುದಕ್ಕಾಗಿ ಆತ ಕಾರನ್ನು ಕದ್ದು, ಪ್ರೇಯಸಿಯನ್ನು ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿದ್ದಾನೆ.. ಆದ್ರೆ ಇಲ್ಲಿ ಕಾರು ಕದ್ದಿದ್ದು ಅವನಲ್ಲ. ಆತನ ಸ್ನೇಹಿತರು.. ಹಾಗಾದ್ರೆ ಮುಂದೇನಾಯ್ತು ಅನ್ನೋದೇ ಇಂಟ್ರೆಸ್ಟಿಂಗ್‌..
ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ.. ಪ್ರೇಯಸಿಯನ್ನು ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಲು ಕಾರಿಲ್ಲದೆ ಸ್ನೇಹಿತ ಪರದಾಡುತ್ತಿದ್ದ.. ಇದನ್ನು ನೋಡಲಾಗದೆ ಮೂವರು ಸ್ನೇಹಿತರು ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರೊಂದನ್ನು ಕದ್ದಿದ್ದಾರೆ.. ಕಾರು ಕದ್ದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.. ಶ್ರೇಯ್‌, ದೀಪಾಂಶು ಭಾಟಿ ಹಾಗೂ ಅನಿಕೇತ್‌ ನಗರ್‌ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ..
ಗ್ರೇಟರ್‌ ನೋಯ್ಡಾದ ಕಾರ್‌ ಬಜಾರ್‌ನಲ್ಲಿ ನಿಲ್ಲಿಸಲಾಗಿದ್ದು, ಹುಂಡೈ ವೆನ್ಯೂ ಕಾರನ್ನು ಟೆಸ್ಟ್‌ ಡ್ರೈವ್‌ಗೆಂದು ಆರೋಪಿಗಳು ಕೇಳಿದ್ದಾರೆ.. ಅದರಂತೆ ಕಾರ್‌ ಡೀಲರ್‌ ಇಬ್ಬರನ್ನೂ ಹತ್ತಿಕೊಂಡು ಟೆಸ್ಟ್‌ ಡ್ರೈವ್‌ಗೆ ಕರೆದುಕೊಂಡು ಹೋಗಿದ್ದಾರೆ.. ಈ ವೇಳೆ ಆರೋಪಿಗಳು ಕಾರ್‌ ಡೀಲರ್‌ನನ್ನು ಹೊರಗೆ ತಳ್ಳಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ..

Share Post