CrimeNational

ಬಿಜೆಪಿ ಶಾಸಕನ ಮೇಲೆ ವಕೀಲನಿಂದ ಕಪಾಳಮೋಕ್ಷ!

ಲಖನೌ; ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನ ಮೇಲೆ ಪೊಲೀಸರ ಮುಂದೆಯೇ ವಕೀಲನೊಬ್ಬ ಹಲ್ಲೆ ಮಾಡಿ, ಕಪಾಳಮೋಕ್ಷ ಕೂಡಾ ಮಾಡಿದ್ದಾರೆ.. ಲಖೀಂಪುರ್‌ಖೇರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.. ಕೋ ಆಪರೇಟಿವ್‌ ಬ್ಯಾಂಕ್‌ ಒಂದರ ಚುನಾವಣೆ ಸಂಬಂಧ ನಡೆದ ಗಲಾಟೆ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ..
ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಅವಧೇಶ್‌ ಸಿಂಗ್‌ ಎಂಬಾತನೇ ಬಿಜೆಪಿ ಶಾಸಕ ಯೋಗೇಶ್‌ ವರ್ಮಾ ಮೇಲೆ ಹಲ್ಲೆ ಮಾಡಿದಾತ.. ವಿಡಿಯೋದಲ್ಲಿ ಏಕಾಏಕಿ ಶಾಸಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಗಳಿವೆ.. ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಇದೆ.. ಆದ್ರೆ ಈ ಚುನಾವಣೆಯನ್ನು ಮುಂದೂಡಬೇಕೆಂದು ಶಾಸಕರು ಪತ್ರ ಬರೆದಿದ್ದರಂತೆ.. ಈ ಹಿನ್ನೆಲೆಯಲ್ಲಿ ವಕೀಲ ಶಾಸಕರೊಂದಿಗೆ ಜಗಳ ತೆಗೆದಿದ್ದಾನೆ.. ಇದ್ದಕ್ಕಿದ್ದಂತೆ ಶಾಸಕನಿಗೆ ಕಪಾಳಮೋಕ್ಷ ಮಾಡಿದ್ದಾನೆ..
ಘಟನೆ ನಂತರ ಶಾಸಕನ ಬೆಂಬಲಿಗರು ಕೂಡಾ ವಕೀಲನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.. ಪೊಲೀಸರು ವಕೀಲ ಅವಧೇಶ್‌ ಸಿಂಗ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

Share Post