HealthNational

ಅನಾರೋಗ್ಯದಿಂದ ರತನ್‌ ಟಾಟಾ ನಿಧನ; ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರು

ಮುಂಬೈ; ಟಾಟಾ ಗ್ರೂಪ್‌ ಗೌರವಾಧ್ಯಕ್ಷ ರತನ್‌ ಟಾಟಾ ನಿಧನರಾಗಿದ್ದಾರೆ.. ಅವರಿಗೆ ಸುಮಾರು 86 ವರ್ಷ ವಯಸ್ಸಾಗಿತ್ತು.. ಕೆಲದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೂರು ದಿನಗಳ ಹಿಂದಷ್ಟೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ..
ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೂ ಕೂಡಾ ರತನ್‌ ಟಾಟಾ ಅವರು ಸರಳವಾಗಿ ಬದುಕಿದರು.. ಈ ಮೂಲಕ ಅವರು ದೇಶದಲ್ಲಿ ಎಲ್ಲರ ಮೆಚ್ಚುಗೆ ಗೀಸಿದ್ದರು.. ದಾನಧರ್ಮಗಳಲ್ಲಿ ಹೆಸರಾಗಿದ್ದ ರತನ್‌ ಟಾಟಾ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ನೀಡಿ ಗೌರವಿಸಿತ್ತು..
1937ರಲ್ಲಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿ ಮಗನಾಗಿ ರತನ್‌ ಟಾಟಾ ಅವರು ಜನಿಸಿದರು. ಅವಿವಾಹಿತರಾಗಿ ರತನ್‌ ಟಾಟಾ ಅವರು ತಮ್ಮ ಉದ್ಯಮವನ್ನು ದೊಡ್ಡದಾಗಿ ಬೆಳೆಸಿದರು.. ಪಿತ್ರಾರ್ಜಿತವಾಗಿ ಬಂದ ಟಾಟಾ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಕೀರ್ತಿ ರತನ್‌ ಟಾಟಾ ಅವರದ್ದು.. ರತನ್‌ ಟಾಟಾ ಅವರು ಅನೇಕ ಕಂಪನಿಗಳನ್ನು ಸ್ಥಾಪಿಸಿದ ಕೀರ್ತಿ ಹೊಂದಿದ್ದಾರೆ,.. ಅವರು ಟಾಟಾ ಮೋಟಾರ್ಸ್‌, ಟಾಟಾ ಸ್ಟೀಲ್‌, ಟಾಟಾ ಪವರ್‌, ಟಿಸಿಎಸ್‌, ಟಾಟಾ ಟೀ ಸೇರಿದಂತೆ ಹಲವು ಉದ್ಯಮಗಳನ್ನು ಸ್ಥಾಪಿಸಿ, ಪಿತ್ರಾರ್ಜಿತ ಕಂಪನಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದರು.

Share Post