CrimeNational

3 ವರ್ಷದ ಹಿಂದೆ ನಾಪತ್ತೆ; ಈಗ ಪ್ರಿಯಕರಣ ಮನೆಯಲ್ಲಿ ಮಹಿಳೆ ಪತ್ತೆ!

ಉತ್ತರಪ್ರದೇಶ; ವಿವಾಹಿತ ಮಹಿಳೆ ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದಳು.  ಇದೀಗ ಆಕೆ ತನ್ನ ಪ್ರಿಯಕನ ಜೊತೆ ಪತ್ತೆಯಾಗಿದ್ದಾಳೆ.. ಉತ್ತರಪ್ರದೇಶದ ರಾಜಧಾನಿ luknow ದಲ್ಲಿ ಈ ಘಟನೆ ನಡೆದಿದೆ.. ನಾಪತ್ತೆಯಾದಾಗ ಆಕೆಯ ಪತಿ ಹಾಗೂ ಅತ್ತೆಯ ಮೇಲೆ ದೂರು ನೀಡಲಾಗಿತ್ತು. ಅಪಹರಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಆದ್ರೆ ಇದೀಗ ಆಕೆ ಜೀವಂತವಾಗಿ ಪತ್ತೆಯಾಗಿದ್ದಾಳೆ..

2017ರ ನವೆಂಬರ್ 17 ರಂದು ದಾದುಹಾ ಬಜಾರ್​ನ ವಿನಯ್​ ಎಂಬಾತನನ್ನು ಕವಿತಾ ಎಂಬಾಕೆ ವಿವಾಹವಾಗಿದ್ದಳು. ಮೇ 5, 2021ರಿಂದ ಕವಿತಾ ನಾಪತ್ತೆಯಾಗಿದ್ದಳು.. ಎಷ್ಟು ಹುಡುಕಾಡಿದರು ಆಕೆ ಸಿಕ್ಕಿರಲಿಲ್ಲ.. ಕವಿತಾ ಪೋಷಕರು ಗಂಡನ ಮನೆಯವರ ಬಗ್ಗೆ ಅನುಮಾನ ಪಟ್ಟಿದ್ದರು. ಆದ್ರೆ ಇದೀಗ 3 ವರ್ಷಗಳಿಂದ ಕಾಣಿಸಿಕೊಳ್ಳದ ಆಕೆ ಲಕ್ನೋದಲ್ಲಿ ಬಾಯ್​ಫ್ರೆಂಡ್​ ಜತೆ ಇರುವುದು ತಿಳಿದುಬಂದಿದೆ. ಲಕ್ನೋದ ದಲಿಗಂಜ್ ಪ್ರದೇಶದಲ್ಲಿ ಆಕೆಯ ಗೆಳೆಯ ಸತ್ಯ ನಾರಾಯಣ ಗುಪ್ತಾ ಅವರ ನಿವಾಸದಲ್ಲಿ ಕವಿತಾ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ..

 

Share Post