NationalPolitics

ಹರಿಯಾಣದಲ್ಲಿ ಸಮೀಕ್ಷೆ ಉಲ್ಟಾ; ಬಿಜೆಪಿಗೆ ಮುನ್ನಡೆ

ನವದೆಹಲಿ; ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಚುನಾವಣೋತ್ತರ ಸಮೀಕ್ಷೆಗೆ ವಿರುದ್ಧವಾಗಿ ಹರಿಯಾಣದಲ್ಲಿ ಫಲಿತಾಂಶ ಬರುತ್ತಿದೆ.. ಹರಿಯಾಣದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುತ್ತಿದೆ..

  ಹರಿಯಾಣದಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುಂದಿದ್ದರೆ, ನಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಸದ್ಯ ಬಿಜೆಪಿ 49, ಕಾಂಗ್ರೆಸ್ 35, ಇತರರು 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಜೆಕೆಎನ್‌ಸಿ 51, ಪಿಡಿಪಿ 2, ಬಿಜೆಪಿ 22 ಮತ್ತು ಇತರರು 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

Share Post