BengaluruCrime

ಬೆಂಗಳೂರಲ್ಲಿ ಆರುಷಿ ರೀತಿಯ ಮರ್ಡರ್‌; 13ರ ಬಾಲಕಿ ಕೊಂದವರು ಯಾರು..?

ಬೆಂಗಳೂರು; ನಿಮಗೆ ಆರುಷಿ ಮರ್ಡರ್‌ ಕೇಸ್‌ ಬಗ್ಗೆ ಗೊತ್ತಿರಬಹುದು.. ರಾತ್ರಿ ತನ್ನ ಕೋಣೆಯಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿ ಆರುಷಿ ಅಲ್ಲಿಯೇ ಕೊಲೆಯಾಗಿ ಹೋಗಿದ್ದಳು.. ಈ ಘಟನೆ ನಡೆದು 15 ವರ್ಷಗಳೇ ಕಳೆದಿವೆ.. ಆದ್ರೆ ಈ ಕೊಲೆ ಮಾಡಿದ್ದು ಯಾರು ಅನ್ನೋದು ಇನ್ನೂ ಕನ್ಫರ್ಮ್‌ ಆಗಿಲ್ಲ.. ಇದೀಗ ಇಂತದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.. 13 ವರ್ಷದ ಬಾಲಕಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದಾಳೆ.. ಮೊದಲಿಗೆ ಅಸಹಜ ಸಾವು ಎಂದೇ ಎಲ್ಲರೂ ಭಾವಿಸಿದ್ದರು.. ಆದ್ರೆ ಪೋಸ್ಟ್‌ಮರ್ಟಂ ವರದಿಯಲ್ಲಿ ಇದು ಕೊಲೆ ಅನ್ನೋದು ಗೊತ್ತಾಗಿದೆ.. ಹೀಗಾಗಿ ಪೊಲೀಸರಿಗೆ ಈ ಪ್ರಕರಣ ಬೇಧಿಸೋದೇ ದೊಡ್ಡ ತಲೆಬಿಸಿಯಾಗಿದೆ..
ತಿಲಕ್‌ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಜಯನಗರ ಉಷಾ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಮುರುಳೀಧರ್‌ ಹಾಗೂ ಶೃತಿ ಕುಟುಂಬ ವಾಸವಿದೆ.. ಇವರ ಒಬ್ಬಳೇ ಮಗಳು ಗರ್ಗಿ.. ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಗರ್ಗಿ ಮುರಳೀಧರ್‌, ಮೇ 23ರಂದು ಮನೆಯಲ್ಲೇ ಮಲಗಿದಲ್ಲೇ ಸಾವನ್ನಪ್ಪಿದ್ದಳು.. ಹಾಸಿಗೆ ಮೇಲೆ ಮೂತ್ರ ಮಾಡಿಕೊಂಡ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಳು.. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಮೊದಲು ಅನಿಸಿದ್ದು ಇದು ಅಸಹಜ ಸಾವು ಅಂತ.. ಹೀಗಾಗಿ ಮೊದಲಿಗೆ ಯುಡಿಆರ್‌ ದಾಖಲಿಸಿಕೊಂಡಿದ್ದರು.. ಆದ್ರೆ ಕೆದಕುತ್ತಾ ಹೋದಾಗ ಇದು ಕೊಲೆ ಅನ್ನೋದು ಗೊತ್ತಾಗಿದೆ.. ಆದ್ರೆ ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಕೊಲೆ ಮಾಡಿದ್ದು ಯಾರು ಅನ್ನೋದೇ ಪ್ರಶ್ನೆ.. ಪೋಷಕರು ಸೇರಿದಂತೆ ಹಲವರ ಮೇಲೆ ಅನುಮಾನ ಇದೆಯಾದರೂ ಪೊಲೀಸರಿಗೆ ಅದಕ್ಕೆ ಪುಷ್ಠಿ ನೀಡುವ ಸಾಕ್ಷ್ಯಗಳು ಸಿಗುತ್ತಿಲ್ಲ.. ಹೀಗಾಗಿ ಪೊಲೀಸರಿಗೆ ಆರುಷಿ ಮರ್ಡರ್‌ ಕೇಸ್‌ನಂತೆ ಈ ಪ್ರಕರಣ ಕೂಡಾ ಕಗ್ಗಂಟಾಗಿದೆ.
ಅಂದಹಾಗೆ ಕೊಲೆಯಾದ ಗರ್ಗಿ, ಕೃಷ್ಣಮೂರ್ತಿ ಎಂಬುವವರ ಬಳಿ ಗಣಿತ ಟ್ಯೂಷನ್‌ಗೆ ತೆರಳುತ್ತಿದ್ದಳು.. ಮೇ 22ರಂದು ಬೆಳಗ್ಗೆ ತನ್ನ ತಾಯಿಯ ಜೊತೆ ಆಕೆ ಅಶೋಕನಗರದಲ್ಲಿರುವ ತನ್ನ ಅಜ್ಜನ ಮನೆಎ ಹೋಗಿದ್ದಳು.. ಸಂಜೆ ಮನೆಗೆ ವಾಪಸ್ಸಾಗಿದ್ದಳು.. ನಂತರ ತಾಯಿ-ಮಗಳಿಬ್ಬರೂ ಸಂಜೆ ಏಳು ಗಂಟೆಗೆ ಚಾಟ್ಸ್‌ ತಿನ್ನಲು ಹೋಗಿದ್ದರು.. ರಾತ್ರಿ ಮನೆಗೆ ಬಂದು ಮಲಗಿದ್ದರು.. ಗರ್ಗಿ ತನ್ನ ರೂಮ್‌ನಲ್ಲಿ ಮಲಗಿದ್ದಳು.. ಬೆಳಗ್ಗೆ ಏಳು ಗಂಟೆಗೆ ತಾತಿ ನೋಡಿದಾಗ ಮಗಳು ಗರ್ಗಿ ಮಲಗಿದಲ್ಲಿಯೇ ಹಾಗೇ ಬಿದ್ದುಕೊಂಡಿದ್ದಳು.. ಎಷ್ಟು ಎಬ್ಬಿಸಿದರೂ ಎದ್ದಿಲ್ಲ.. ಮಲಗಿದಲ್ಲೇ ಮೂತ್ರ ಮಾಡಿಕೊಂಡಿದ್ದಳು.. ಇದರಿಂದಾಗಿ ಪೊಲೀಸರು ಕೂಡಲೇ ಅಪಾರ್ಟ್‌ಮೆಂಟ್‌ನಲ್ಲಿಯೇ ಇರುವ ವೈದ್ಯರೊಬ್ಬರನ್ನು ಕರೆಸಿದರು.. ಪರೀಕ್ಷೆ ಮಾಡಿದ ವೈದ್ಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗರ್ಗಿ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ..
ಈ ಬಗ್ಗೆ ತಿಲಕ್‌ನಗರ ಪೊಲೀಸ್‌ ಠಾಣೆಯಲ್ಲಿ ಯುಡಿಆರ್‌ ದಾಖಲು ಮಾಡಲಾಗಿತ್ತು.. ಆರೋಗ್ಯವಾಗಿದ್ದ ಮಗಳು ಬೆಳಗಾಗುವಷ್ಟರಲ್ಲಿ ಮೃತಪಟ್ಟ ಬಗ್ಗೆ ಪೋಷಕರೇ ಅನುಮಾನ ವ್ಯಕ್ತಪಡಿಸಿದ್ದರು.. ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ.. ಇದರ ವರದಿಯಲ್ಲಿ ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಅನ್ನೋದು ಗೊತ್ತಾಗಿದೆ.. ಬಾಲಕಿಯ ಕಿವಿಯನ್ನು ಬಲವಾಗಿ ಒತ್ತಿರುವ ಬಗ್ಗೆಯೂ ಗೊತ್ತಾಗಿದೆ.. ದಿಂಬು ಅಥವಾ ಯಾವುದೋ ವಸ್ತು ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಅನ್ನೋದು ಕನ್ಫರ್ಮ್‌ ಆಗಿದೆ.. ಆದ್ರೆ, ಗರ್ಗಿ ಕೊಲೆ ಮಾಡಿದವರು ಯಾರು ಅನ್ನೋದೇ ಈಗಿರುವ ಪ್ರಶ್ನೆ.. ಪೊಲೀಸರಿಗೆ ಯಾರ ಮೇಲೆ ಅನುಮಾನ ಪಡೋದು ಅನ್ನೋದೇ ಗೊತ್ತಾಗುತ್ತಿಲ್ಲ.. ಮನೆಯವರನ್ನು ಪೊಲೀಸರು ವಿಚಾರಣೆ ಮಾಡಿ ಒಂದಷ್ಟು ಮಾಹಿತಿ ಪಡೆದಿದ್ದಾರೆ.. ಈ ಪ್ರಕರಣ ಪೊಲೀಸರಿಗೆ ಒಂದು ಸವಾಲೇ ಸರಿ..

Share Post