CrimeLifestyle

ಸುಂದರ ಮಗು ಪಡೆಯಲು ಮೈದುನನ ಜೊತೆ ಮಹಿಳೆ ಎಸ್ಕೇಪ್‌!

ಮಧ್ಯಪ್ರದೇಶ; ಮುದ್ದಾದ ಮಗುವನ್ನು ಪಡೆಯೋದಕ್ಕೆ ವಿವಾಹಿತ ಮಹಿಳೆಯೊಬ್ಬರು ಹ್ಯಾಂಡ್ಸಮ್‌ ಆಗಿರುವ ತನ್ನ ಮೈದುನನ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ.. ಮಧ್ಯಪ್ರದೇಶದ ಛತ್ತರ್‌ಪುರ್‌ನಲ್ಲಿ ಈ ಘಟನೆ ನಡೆದಿದೆ.. ಈ ಬಗ್ಗೆ ಮಹಿಳೆಯ ಗಂಡ ಛತ್ತರ್‌ಪುರ್‌ ಎಸ್‌ಪಿಗೆ ದೂರು ನೀಡಿದ್ದಾನೆ..
ನಮ್ಮಿಬ್ಬರಿಗೆ ಮದುವೆಯಾಗಿ ಹತ್ತು ವರ್ಷ ಆಗಿದೆ.. ಆದ್ರೆ ನನ್ನ ಮಗುವನ್ನು ಆಕೆಗೆ ತನ್ನ ಹೊಟ್ಟೆಯಲ್ಲಿ ಹೊರುವುದು ಇಷ್ಟವಿರಲಿಲ್ಲ.. ಹೀಗಾಗಿ ನಿನ್ನಿಂದ ಮಗು ಪಡೆಯೋದಕ್ಕೆ ನನಗೆ ಇಷ್ಟವಿಲ್ಲ ಎಂದೇ ಹೇಳುತ್ತಾ ಬಂದಿದ್ದಳು.. ನನಗಿಂತ ನನ್ನ ತಮ್ಮ ಸುಂದರವಾಗಿದ್ದಾನೆ.. ಹೀಗಾಗಿ ನಮ್ಮ ತಮ್ಮ ಆಕೆಗೆ ಇಷ್ಟವಾಗಿದ್ದಾಳೆ.. ಈ ಕಾರಣದಿಂದ ಆತನಿಂದ ಮಗು ಪಡೆದರೆ ಹುಟ್ಟುವ ಮಗು ಸುಂದರವಾಗಿರುತ್ತೆ ಎಂಬ ನಂಬಿಕೆ ಆಕೆಯದ್ದು.. ಹೀಗಾಗಿ ಆಕೆ ನನ್ನ ಸಹೋದರ ಜೊತೆ ಓಡಿಹೋಗಿದ್ದಾಳೆ ಎಂದು ಮಹಿಳೆಯ ಗಂಡ ಗೋಳು ತೋಡಿಕೊಂಡಿದ್ದಾನೆ..
ಓಡಿಹೋಗಿರುವ ಮಹಿಳೆ ಪದೇ ಪದೇ ಮೆಸೇಜ್‌ ಮಾಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾಳಂತೆ.. ಈ ಹಿನ್ನೆಲೆಯಲ್ಲಿ ಪತಿ ತನ್ನ ಕುಟುಂಬದ ಸದಸ್ಯರೊಂದಿಗೆ ಎಸ್‌ಪಿ ಕಚೇರಿಗೆ ಹೋಗಿ ನಡೆದ ಘಟನೆಯನ್ನು ವಿವರಿಸಿ ದೂರು ಕೊಟ್ಟಿದ್ದಾನೆ.. ಆಕೆ ಯಾರೊಂದಿಗೆ ಬೇಕಾದರೂ ಹೋಗಲಿ, ಹೇಗಾದರೂ ಇರಲಿ. ನಮಗೆ ಕಿರುಕುಳ ನೀಡದಿದ್ದರೆ ಸಾಕು ಎಂದು ಗಂಡ ಹೇಳುತ್ತಿದ್ದಾನೆ..

Share Post