ಈ ದಿನಾಂಕದಲ್ಲಿ ಜನಿಸಿದ ಹುಡುಗಿಯರು ಅದೃಷ್ಟ ಲಕ್ಷ್ಮಿಯರು!
ಬೆಂಗಳೂರು; ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರ ಕೂಡಾ ಅತ್ಯಂತ ಮಹತ್ವದ್ದೆನಿಸುತ್ತದೆ.. ತುಂಬಾ ಜನ ಏನೇ ಮಾಡಬೇಕಂದ್ರೂ ಸಂಖ್ಯೆಗಳನ್ನು ಲೆಕ್ಕ ಇಡುತ್ತಾರೆ.. ಅವರ ಅದೃಷ್ಟ ಸಂಖ್ಯೆಗಳ ಪ್ರಕಾರವೇ ತಮ್ಮ ಕೆಲಸ ಕಾರ್ಯಗಳನ್ನು ಶುರು ಮಾಡುತ್ತಾರೆ.. ಹುಟ್ಟಿದ ದಿನಾಂಕದ ಆಧಾರದ ಮೇಲೆ ಮನುಷ್ಯರ ಭವಿಷ್ಯ, ಅವರ ಜೀವನ ಮುಂತಾದುವುಗಳನ್ನು ನಿರ್ಧಾರ ಮಾಡಲಾಗುತ್ತದೆ.. ಅದರಂತೆ ಕೆಲ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ಹುಟ್ಟಿದ ಮನೆಗೂ, ಗಂಡನ ಮನೆಗೂ ಅದೃಷ್ಟ ತಂದುಕೊಡುತ್ತಾರೆ ಅಂತ ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ..
ಯಾವುದೇ ತಿಂಗಳ 2, 11 ಹಾಗೂ 20 ದಿನಾಂಕಗಳಂದು ಜನಿಸಿದ ಹುಡುಗಿಯರು ಉತ್ತಮ ಹೆಂಡತಿಯರಾಗುತ್ತಾರಂತೆ.. ಗಂಡನ ಮನೆಗೆ ಒಳ್ಳೆಯ ಹೆಸರು ತಂದುಕೊಡುತ್ತಾರಂತೆ..!. ಇವರನ್ನು ಮದುವೆಯಾಗುವ ಪರುಷರು ಅತ್ಯಂತ ಅದೃಷ್ಟವಂತರು ಅಂತ ಸಂಖ್ಯಾಶಾಸ್ತ್ರ ಹೇಳುತ್ತೆ.. ಈ ದಿನಾಂಕಗಳಲ್ಲಿ ಜನಿಸಿದವರು ಸೊಸೆಯಾಗುವ ಹೋಗುವ ಮನೆಗೆ ಸಿರಿ ತಂದುಕೊಡುತ್ತಾರೆ.. ಆ ಮನೆಗೆ ಲಕ್ಷ್ಮೀ ಕಾಲಿಟ್ಟಂತೆಯೇ ಲೆಕ್ಕ.. ಆ ಮನೆಯ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿಬಿಡುತ್ತದೆ.. ಗಂಡನ ಮನೆಯಲ್ಲಿ ದುಃಖ, ಸಂಕಟ ಮಾಯವಾಗುತ್ತದೆ.. ಸಂತೋಷ ಮನೆ ಮಾಡುತ್ತದೆ..