CrimeInternational

100ಕ್ಕೂ ಹೆಚ್ಚು ಕ್ಷಿಪಣಿಗಳ ದಾಳಿ; ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗ ಪ್ರಯಾಣಿಕರು!

ಇಸ್ತಾಂಬುಲ್‌; ಇಸ್ರೇಲ್‌ ಮೇಲೆ ಇರಾನ್‌ 100ಕ್ಕೂ ಹೆಚ್ಚು ಕ್ಷಿಪಣಿಗಳ ದಾಳಿ ನಡೆಸಿದೆ.. ಇದರಿಂದಾಗಿ ವಿಮಾನ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದ್ದು, ಕನ್ನಡಿಗರು ಕೂಡಾ ಸಂಕಷ್ಟದಲ್ಲಿ ಸಿಲುಕಿದ್ದಾರೆ.. ಕನ್ನಡಿಗರು ಸ್ವಿಡ್ಜರ್ಲೆಂಡ್‌ ರಾಜಧಾನಿ ಜ್ಯೂರಿಕ್‌ನಿಂದ ದುಬೈಗೆ ಬಂದಿದ್ದರು.. ದುಬೈನಿಂದ ಅವರು ಬೆಂಗಳೂರಿಗೆ ಬರಬೇಕಿತ್ತು.. ಈ ವೇಳೆಯೇ ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ಮಾಡಿದೆ..
ಕ್ಷಿಪಣಿ ದಾಳಿ ಮಾಡುತ್ತಿದ್ದಂತೆ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.. ಎಲ್ಲಾ ಪ್ರಯಾಣಿಕರೂ ವಿಮಾನದಲ್ಲೇ ಇದ್ದಯ ಸೇಫಾಗಿದ್ದಾರೆ ಎಂದು ತಿಳಿದುಬಂದಿದೆ.. ಕರ್ನಾಟಕದ ಪ್ರಯಾಣಿಕರು ಸೇರಿ ಒಟ್ಟು 300 ಮಂದಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು..
ಜ್ಯೂರಿಕ್‌ ಕಾಲಮಾನ ಮಧ್ಯಾಹ್ನ 3.25ಕ್ಕೆ ಟೇಕಾಫ್‌ ಆಗಿತ್ತು. ರಾತ್ರಿ 10 ಗಂಟೆಗೆ ಆ ವಿಮಾನ ದುಬೈ ತಲುಪಬೇಕಿತ್ತು.. ಆದ್ರೆ, ಕ್ಷಿಪಣಿ ದಾಳಿಯಿಂದಾಗಿ ಪ್ರಯಾಣಿಕರೆಲ್ಲಾ ವಿಮಾನದಲ್ಲೇ ಇದ್ದಾರೆ.. ಸದ್ಯಕ್ಕೆ ಎಲ್ಲರೂ ಸೇಫಾಗಿದ್ದಾರೆ.. ಆದ್ರೆ ಭೀತಿಯಂತೂ ಇದ್ದೇ ಇದೆ.. ಕ್ಷಿಪಣಿ ದಾಳಿ ಹಿನ್ನೆಲೆಯಲ್ಲಿ ಇರಾನ್‌ ಹಾಗೂ ಇರಾಕ್‌ ವಾಯುಸೀಮೆಯನ್ನು ಬಂದ್‌ ಮಾಡಲಾಗಿದೆ.. ಈ ಭಾಗದಲ್ಲಿ ಯಾವುದೇ ವಿಮಾನದ ಹಾರಾಟ ನಡೆಸುತ್ತಿಲ್ಲ..

 

Share Post