International

ಯಾವುದೇ ಕಾರಣಕ್ಕೂ ಶೆಲ್ಟರ್‌ಗಳಿಂದ ಹೊರಬರಬೇಡಿ: ವಿದ್ಯಾರ್ಥಿಗಳಿಗೆ ಭಾರತೀಯ ಸಚಿವಾಲಯ ಸೂಚನೆ

ಸುಮಿ: ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. ಕೇವಲ ಎರಡು ಪ್ರದೇಶಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ಯುದ್ಧ ನಿಲ್ಲಿಸಲಾಗಿದೆ. ಆದರೆ ಉಕ್ರೇನ್‌ನಲ್ಲಿರುವ ಸುಮಿ ಪ್ರದೇಶದಲ್ಲಿ ಇನ್ನು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಲ್ಲರನ್ನೂ ವಾಪಸ್‌ ಕರೆತರಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಅಲ್ಲಿರುವ ವಿದ್ಯಾರ್ಥಿಗಳು ಕೂಡಲೇ ನಮ್ಮನ್ನು ಇಲ್ಲಿಂದ ಸ್ಥಳಾಂತರ ಮಾಡಿ ಎಂದು ವಿಡಿಯೋ ಮಾಡಿ ಮನವಿ ಕೂಡಾ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು ಎಲ್ಲರನ್ನು ಸ್ಥಳಾಂತರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ಸಚಿವಾಲಯ ಸುಮಿಯಲ್ಲಿ ಯುದ್ಧದ ಪರಿಸ್ಥಿತಿ ಮಿತಿಮೀರಿದೆ. ಅಲ್ಲಿರುವ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಹೊರಬರಬೇಡಿ. ಸಾಧ್ಯವಾದಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ಶೆಲ್ಟರ್​​ಗಳ ಒಳಗೇ ಇರಿ. ಎಲ್ಲರನ್ನೂ ರಕ್ಷಣೆ ಮಾಡುವ ಸಲುವಾಗಿ, ಕದನ ವಿರಾಮ ಘೋಷಿಸಿ ಸುರಕ್ಷಿತ ಕಾರಿಡಾರ್​ ಸೃಷ್ಟಿಸಿಕೊಡುವಂತೆ ಭಾರತ ರಷ್ಯಾ ಮತ್ತು ಉಕ್ರೇನ್​ಗೆ ನಾವು ಒತ್ತಾಯಿಸಿದ್ದೇವೆ. ಪ್ರತಿಯೊಬ್ಬರನ್ನೂ ರಕ್ಷಣೆ ಮಾಡುವವರೆಗೂ ನಮ್ಮ ಕಂಟ್ರೋಲ್​ ರೂಂ ಸಕ್ರಿಯವಾಗಿಯೇ ಇರುತ್ತದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.

Share Post