CrimeNational

ಮನೆಗೆ ನುಗ್ಗಿದ ದರೋಡೆಕೋರರನ್ನು ಏಕಾಂಗಿಯಾಗಿ ಹಿಮ್ಮೆಟ್ಟಿಸಿದ ಮಹಿಳೆ!

ಚಂಡೀಗಢ; ಮನೆ ದರೋಡೆಗೆಂದು ಬಂದ ಮೂವರು ದರೋಡೆಕೋರರನ್ನು ಮಹಿಳೆಯೊಬ್ಬರು ಧೈರ್ಯದಿಂದ ಹಿಮ್ಮೆಟ್ಟಿಸಿದ್ದಾರೆ.. ಮೂವರು ದರೋಡೆಕೋರರು ಮನೆಯ ಬಳಿ ಬರುತ್ತಿದ್ದುದನ್ನು ಗಮನಿಸಿದ ಮಹಿಳೆ ಅವರು ಮನೆಯೊಳಗೆ ಬರದಂತೆ ತಡೆದಿದ್ದಾಳೆ.. ಮೂವರು ದರೋಡೆಕೋರರು ಮುಂಬಾಗಿಲನ್ನು ತಳ್ಳುತ್ತಿದ್ದರೂ ಒಳಗಡೆಯಿಂದ ಮಹಿಳೆ ಒಬ್ಬಳೇ ಬಾಗಿಲನ್ನು ಮುಚ್ಚಿ ಹಿಡಿದಿದ್ದಾಳೆ.. ಹರಸಾಹಸಪಟ್ಟು ಬಾಗಿಲು ಚಿಲಕ ಹಾಕಿದ್ದಾಳೆ.. ಇದರಿಂದಾಗಿ ಮನೆ ಒಳನುಗ್ಗಲಾಗದೇ ದರೋಡೆಕೋರರು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ..
ಪಂಜಾಬ್‌ನ ಅಮೃತಸರದ ನಿವಾಸವೊಂದರಲ್ಲಿ ಈ ಘಟನೆ ನಡೆದಿದೆ.. ಮನೆ ಬಾಗಿಲು ತೆರೆದಿದ್ದು, ಮಹಿಳೆ ಮನೆಯಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದರು.. ಈ ವೇಳೆ ಕಾಂಪೌಂಡ್‌ ಜಂಪ್‌ ಮಾಡಿ ಮೂವರು ದರೋಡೆಕೋರರು ಬಂದಿದ್ದಾರೆ.. ಅದನ್ನು ನೋಡಿದ ಮಹಿಳೆ ಕೂಡಲೇ ಬಾಗಿಲು ಹಾಕಲು ಹೋಗಿದ್ದಾಳೆ.. ಆದ್ರೆ ದರೋಡೆಕೋರರು ಬಾಗಿಲು ತಳ್ಳಲು ಶುರು ಮಾಡಿದ್ದಾರೆ.. ಆದರೂ ಕೂಡಾ ಮಹಿಳೆ ಒಬ್ಬರೇ ಒಳಗಿನಿಂದ ಬಾಗಿಲು ಒತ್ತಿ ಹಿಡಿದು ದರೋಡೆಕೋರರು ಒಳನುಗ್ಗದಂತೆ ತಡೆದಿದ್ದಾರೆ.. ಹರಸಾಹಸಪಟ್ಟು ಚಿಲಕ ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ.. ನಂತರ ಬಾಗಿಲಿಗೆ ಅಡ್ಡಲಾಗಿ ಸೋಫಾ ಇಟ್ಟಿದ್ದಾಳೆ,..
ಇದರಿಂದಾಗಿ ದರೋಡೆಕೋರರು ಹೊರಗಿನಿಂದ ಎಷ್ಟು ಪ್ರಯತ್ನಪಟ್ಟರೂ ಒಳನುಗ್ಗೋದಕ್ಕೆ ಆಗಿಲ್ಲ.. ಇದರಿಂದ ದರೋಡೆಕೋರರು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ..

Share Post