CrimeNational

ಪುಣೆ ಬಳಿ ಹೆಲಿಕಾಪ್ಟರ್‌ ಪತನ; ಮೂವರ ದುರ್ಮರಣ!

ಪುಣೆ; ಪುಣೆ ಬಳಿ ಹೆಲಿಕಾಪ್ಟರ್‌ ಒಂದು ಪತನವಾಗಿದೆ.. ಪತನವಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಮೂವರೂ ಸಜೀವ ದಹನವಾಗಿದ್ದಾರೆ.. ಪುಣೆಯ ಬವ್ಧಾನ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ..
ಬೆಳಗ್ಗೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಿಪತ್ತು ಪರಿಹಾರ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ.. ಮಂಜು ಮುಸುಕಿದ ವಾತಾವರಣವೇ ದುರ್ಘಟನೆ ಕಾರಣ ಎಂದು ತಿಳಿದುಬಂದಿದೆ.
ಅಧಿಕಾರಿಗಳು ಘಟನೆ ಸಂಬಂಧ ತನಿಖೆಗೆ ಆದೇಶ ನೀಡಿದ್ದಾರೆ.. ತನಿಖೆಯ ನಂತರವೇ ಘಟನೆಗೆ ನಿಜವಾದ ಕಾರಣ ಗೊತ್ತಾಗಲಿದೆ.. ಮೃತರ ಬಗ್ಗೆ ಇನ್ನೂ ಮಾಹಿತಿ ಹೊರಬೀಳಬೇಕಿದೆ..

Share Post