CinemaNational

ಆ ನಿರ್ದೇಶಕ ಎಲ್ಲರ ಮುಂದೆ ಕಪಾಳಕ್ಕೆ ಹೊಡೆದಿದ್ದ; ನಟಿ ಪದ್ಮಪ್ರಿಯಾ

ಚೆನ್ನೈ; ಕೇರಳದಲ್ಲಿ ಹೇಮಾ ಕಮಿಟಿ ವರದಿ ಬಹಿರಂಗವಾದ ಮೇಲೆ ನಟಿಯರು ಈ ಹಿಂದೆ ತಮಗಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.. ಹತ್ತಾರು ನಟಿಯರು ಈಗಾಗಲೇ ತಮಗಾದ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ.. ಇದೀಗ ಬಹುಭಾಷಾ ನಟಿ ಪದ್ಮಪ್ರಿಯಾ ಸರದಿ.. ಪದ್ಮಪ್ರಿಯಾ ಅವರು ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾಗ ಎಲ್ಲರ ಮುಂದೆಯೇ ತಮಿಳು ನಿರ್ದೇಶಕ ಕಪಾಳಕ್ಕೆ ಬಾರಿಸಿದ್ದರಂತೆ.. ಈ ವಿಚಾರವನ್ನು ಪದ್ಮಪ್ರಿಯಾ ಈಗ ಹಂಚಿಕೊಂಡಿದ್ದಾರೆ..
2004ರಲ್ಲಿ ಪದ್ಮಪ್ರಿಯಾ ಚಿತ್ರರಂಗ ಎಂಟ್ರಿ ಕೊಟ್ಟರು.. ಅವರು ಸುಮಾರು ಏಳು ಭಾಷೆಗಳಲ್ಲಿ ನಟನೆ ಮಾಡಿದ್ದಾರೆ.. ಮಲಯಾಳಂನಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪದ್ಮಪ್ರಿಯಾ 2007ರಲ್ಲಿ ತಮಿಳಿನ ಮೃಗಂ ಸಿನಿಮಾದಲ್ಲಿ ನಟಿಸುವಾಗ ಆದ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ.. ಕಾಲೇಜೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪದ್ಮಪ್ರಿಯಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.
ಆ ಘಟನೆ ನನಗೆ ಸಾಕಷ್ಟು ಆಘಾತವನ್ನುಂಟು ಮಾಡಿತ್ತು.. ಮಾಧ್ಯಮಗಳು ಅದನ್ನು ಉಲ್ಟಾ ಬರೆದು ನಾನೇ ನಿರ್ದೇಶಕನಿಗೆ ಹೊಡೆದಿದ್ದೇನೆ ಎಂದು ಹೇಳಿದ್ದವು.. ಅನಂತರ ಸಿನಿಮಾ ಸಂಘಗಳಿಗೆ ದೂರು ಕೊಟ್ಟೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ನಟಿ ಪದ್ಮಪ್ರಿಯಾ ಹೇಳಿಕೊಂಡಿದ್ದಾರೆ..

Share Post