BengaluruPolitics

ಸಿದ್ದರಾಮಯ್ಯಗೆ `75’ರ ಬಲ!; ಕಾಂಗ್ರೆಸ್‌ಗೆ ಅಹಿಂದ ನಾಯಕ ಅನಿವಾರ್ಯವಾ..?

ಬೆಂಗಳೂರು; ಸಿದ್ದರಾಮಯ್ಯ ಅತ್ಯಂತ ಶುದ್ಧರಾಮಯ್ಯ ಎಂದೇ ಹೆಸರು ಪಡೆದವರು.. ಹಾಗೆ ನೋಡಿದರೆ ದಶಕಗಳ ಅವರ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ.. ಮುಡಾದ ಬದಲಿ ನಿವೇಶನ ಪಡೆದ ವಿಚಾರದಲ್ಲೂ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ.. ಆದರೂ ಈಗ ಅವರು ಈ ಪ್ರಕರಣದಲ್ಲಿ A1 ಆರೋಪಿ.. ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.. ಇನ್ಮೇಲೆ ಸಿದ್ದರಾಮಯ್ಯ ವಿಚಾರಣೆ ಎದುರಿಸಬೇಕಾಗುತ್ತದೆ.. ವಿರೋಧ ಪಕ್ಷಗಳ ಆಗ್ರಹದ ನಡುವೆಯೂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದುಕೊಂಡೇ ವಿಚಾರಣೆ ಎದುರಿಸೋಕೆ ರೆಡಿಯಾಗಿದ್ದಾರೆ..
ಬೇರೆ ಯಾರಾದರೂ ಆ ಸ್ಥಾನದಲ್ಲಿ ಇದ್ದಿದ್ದರೆ ಕಾಂಗ್ರೆಸ್‌ ಇಷ್ಟೊತ್ತಿಗೆ ಅವರ ರಾಜೀನಾಮೆ ಪಡೆಯುತ್ತಿತ್ತು.. ಆದ್ರೆ ಸಿದ್ದರಾಮಯ್ಯ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಅಂತಹ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ.. ಯಾಕಂದ್ರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಅತಿಹೆಚ್ಚು ಜನಬೆಂಬಲ ಇರುವಂತಹ ರಾಜಕಾರಣಿ.. ಅಷ್ಟೇ ಏನು ಗೆದ್ದಿರುವ ಕಾಂಗ್ರೆಸ್‌ ಶಾಸಕರಲ್ಲಿ ಬಹುತೇಕರು ಸಿದ್ದರಾಮಯ್ಯ ಅವರ ಪರವಾಗಿಯೇ ಇದ್ದಾರೆ.. ಹೀಗಾಗಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದರೆ ರಾಜ್ಯದಲ್ಲಿ ರಾಜಕೀಯ ಎಡವಟ್ಟುಗಳು ಆಗಬಹುದು ಅನ್ನೋದು ಭಯ ಕಾಂಗ್ರೆಸ್‌ ಹೈಕಮಾಂಡ್‌ಗಿದೆ ಎಂದು ಕಾಣುತ್ತದೆ.. ಯಾಕಂದ್ರೆ, ದೇಶದಲ್ಲಿ ನಡೆಯುತ್ತಿರುವ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನಾಯಕರು ಮುಡಾ ವಿಚಾರ ಪ್ರಸ್ತಾಪ ಮಾಡುತ್ತಾ ಮುಜುಗರ ಉಂಟು ಮಾಡುತ್ತಿದ್ದರೂ ಸದ್ಯಕ್ಕೆ ಯಾವುದೇ ನಿರ್ಧಾರಕ್ಕೆ ಬರಲು ಕಾಂಗ್ರೆಸ್‌ ಹೈಕಮಾಂಡ್‌ಗೆ ಆಗುತ್ತಿಲ್ಲ..
ಅಂದಹಾಗೆ, ಸಿದ್ದರಾಮಯ್ಯಗೆ ಅಪಾರ ಜನ ಬೆಂಬಲ ಇರೋದು ಎಲ್ಲರಿಗೂ ಗೊತ್ತಿದೆ.. ಆದ್ರೆ, ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರ ನಿಜವಾದ ತಾಕತ್ತು ಗೊತ್ತಾಗಿದ್ದು, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75 ನೇ ಜನ್ಮದಿನೋತ್ಸವ ನಡೆದಾಗ.. ಅಂದು ನಿರೀಕ್ಷೆ ಮೀರಿ ಜನ ಸೇರಿದ್ದರು.. ಹತ್ತರಿಂದ ಹದಿನೈದು ಲಕ್ಷ ಜನರು ಆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.. ಆ ಜನಸ್ತೋಮ ನೋಡಿ ಸ್ವತಃ ರಾಹುಲ್‌ ಗಾಂಧಿಯವರೇ ಬೆರಗಾಗಿದ್ದರು.. ಹೀಗಾಗಿಯೇ ಚುನಾವಣೆ ಗೆದ್ದ ನಂತರ ಸಿಎಂ ಅಭ್ಯರ್ಥಿ ಆಯ್ಕೆ ವಿಚಾರ ಬಂದಾಗ ಡಿ.ಕೆ.ಶಿವಕುಮಾರ್‌ ಬಿಟ್ಟು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡೋದಕ್ಕೆ ಕಾರಣವಾಯಿತು.. ಆ ದಾವಣಗೆರೆ ಸಮಾವೇಶಕ್ಕೆ ಜನರ ಕಾರಣದಿಂದಲೇ ಶಾಸಕರು ಕೂಡಾ ಹೆಚ್ಚಾಗಿ ಸಿದ್ದರಾಮಯ್ಯ ಅವರ ಪರವಾಗಿ ನಿಂತುಕೊಂಡರು..
ದಾವಣಗೆರೆಯ ಒಂದು ಸಮಾರಂಭ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು.. ಈ ಕಾರಣದಿಂದಲೇ ಇಂತಹ ಒಬ್ಬ ನಾಯಕನನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್‌ ಇದೆ.. ಹೀಗಾಗಿಯೇ ಕೇಸ್‌ ದಾಖಲಾದರೂ ಅವರನ್ನು ಮುಖ್ಯಮಂತ್ರಿಯಾಗಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ..

Share Post