BengaluruPolitics

ಸಿಎಂ ಬದಲಾವಣೆಯ ಸುಳಿವು ಕೊಟ್ಟರಾ ಮಲ್ಲಿಕಾರ್ಜುನ ಖರ್ಗೆ..?

ಬೆಂಗಳೂರು; ಪಕ್ಷದ ಮುಂದೆ ಯಾರೂ ದೊಡ್ಡವರಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಬದಲಾವಣೆಯಾ ಸುಳಿವು ಕೊಟ್ಟರಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ..? ಹೀಗೊಂದು ಅನುಮಾನ ಮೂಡಿದೆ.. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಬೆನ್ನ ಹಿಂದೆ ಕಾಂಗ್ರೆಸ್‌ ಹೈಕಮಾಂಡ್‌ ಇದೆ ಎಂದು ಹೇಳುತ್ತಲೇ ಬಿಜೆಪಿಯವರು ಮುಡಾ ವಿಚಾರ ಮುಂದಿಟ್ಟುಕೊಂಡು ಪಕ್ಷಕ್ಕೆ ಡ್ಯಾಮೇಜ್‌ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ..
ಸಿದ್ದರಾಮಯ್ಯ ಇವತ್ತು ಮುಖ್ಯಮಂತ್ರಿಯಾಗಿರುತ್ತಾರೆ, ನಾಳೆ ಇರೋದಿಲ್ಲ.. ಆದ್ರೆ ಪಕ್ಷ ಯಾವಾಗಲೂ ಇರುತ್ತದೆ ಎಂದು ಖರ್ಗೆ ಹೇಳಿದ್ದಾರೆ.. ಇದರರ್ಥ ಅಗತ್ಯಬಿದ್ದರೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.. ಗೋದ್ರಾ ಘಟನೆ ನಡೆದಾಗ ನರೇಂದ್ರ ಮೋದಿಯವರು ಗುಜರಾತ್‌ ಸಿಎಂ ಆಗಿದ್ದರು. ಆಗ ಅವರು ರಾಜೀನಾಮೆ ನೀಡಿದರೇ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.. ಮೋದಿ, ಅಮಿತ್ ಶಾ ವಿರುದ್ಧ ಹಲವಾರು ಕೇಸ್‌ಗಳು ದಾಖಲಾಗಿವು.. ಆಗ ಅವರು ರಾಜೀನಾಮೆ ನೀಡಿರಲಿಲ್ಲ.. ಯಾರನ್ನೂ ವೈಯಕ್ತಿವಾಗಿ ಟಾರ್ಗೆಟ್‌ ಮಾಡೋದು ಸರಿಯಲ್ಲ ಎಂದು ಖರ್ಗೆ ಇದೇ ವೇಳೆ ಹೇಳಿದ್ದಾರೆ..
ಒಬ್ಬರ ಇಮೇಜ್‌ ಡ್ಯಾಮೇಜ್‌ ಮಾಡುವ ಯತ್ನ ನಡೆಯುತ್ತಿದೆ.. ಆ ಮೂಲಕ ಪಕ್ಷಕ್ಕೂ ಡ್ಯಾಮೇಜ್‌ ಮಾಡೋ ಪ್ರಯತ್ನ ನಡೆಯುತ್ತಿದೆ.. ಅವರ ಇಂಟ್ರೆಸ್ಟ್‌ ಇರೋದು ಪಕ್ಷಕ್ಕೆ ಡ್ಯಾಮೇಜ್‌ ಮಾಡೋದು ಎಂದು ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ..
ಸದ್ಯಕ್ಕೆ ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತದೆ. ಮುಂದೆ ಅಂತಹ ಸ್ಥಿತಿ ಬಂದ್ರೆ ಕ್ರಮ ತೆಗೆದುಕೊಳ್ಳುವ ಚಿಂತನೆ ಮಾಡುತ್ತೇವೆ ಎಂದೂ ಖರ್ಗೆ ಹೇಳಿದ್ದಾರೆ.

Share Post