ಅಸಂಘಟಿತ ಕಾರ್ಮಿಕ ಕನಿಷ್ಠ ವೇತನ ಹೆಚ್ಚಿಸಿದ ಕೇಂದ್ರ ಸರ್ಕಾರ!
ನವದೆಹಲಿ; ಕೇಂದ್ರ ಸರ್ಕಾರ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.. ಯಾವುದೇ ಕುಶಲತೆ ಅವಶ್ಯಕತೆ ಇಲ್ಲದ ಕೆಲಸ ಮಾಡುವ ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 783 ರೂಪಾಯಿ ನೀಡಬೇಕು, ವಾರಕ್ಕೆ ಒಂದು ರಜೆಯಂತೆ ಪರಿಗಣಿಸಿ ತಿಂಗಳಿಗೆ ಕನಿಷ್ಠ 20,358 ರೂಪಾಯಿ ಕನಿಷ್ಠ ವೇತನ ನೀಡಬೇಕೆಂದು ಆದೇಶ ನೀಡಲಾಗಿದೆ..
ಅರೆ ಕೌಶಲ್ಯ ಕಾರ್ಮಿಕರಿಗೆ ದಿನಕ್ಕೆ 868 ರೂಪಾಯಿ, ಉನ್ನತ ಕೌಶಲ್ಯದ ಕಾರ್ಮಿಕರಿಗೆ 1,035 ರೂಪಾಯಿ ಕನಿಷ್ಠ ವೇತನ ನೀಡುವಂಯತೆ ಸೂಚನೆ ನೀಡಲಾಗಿದೆ.. ಈ ಕನಿಷ್ಠ ದಿನಗೂಲಿಯಂತೆ ತಿಂಗಳಿಗೆ 20,358 ರೂಪಾಯಿಯಿಂದ 26,910 ರೂಪಾಯಿಯವರೆಗೂ ನೀಡಬೇಕೆಂದು ಆದೇಶಿಸಿದ್ದು, ಈ ಕಾನೂನು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ..