CrimeNational

ದೇವಸ್ಥಾನದ ಒಳಗೇ ಲೈಂಗಿಕ ದೌರ್ಜನ್ಯ!; ಪೋಕ್ಸೋ ಅಡಿ ಅರ್ಚಕ ಅರೆಸ್ಟ್‌!

ಚೆನ್ನೈ; ದೇವಸ್ಥಾನದಲ್ಲೇ 70 ವರ್ಷದ ಅರ್ಚಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.. ಬಾಲಕಿ ಆರೋಪದ ಹಿನ್ನೆಲೆಯಲ್ಲಿ 70 ವರ್ಷದ ವೃದ್ಧ ಅರ್ಚಕ ತಿಲಾಗರ್‌ ಎಂಬುವವರನ್ನು ಬಂಧಿಸಲಾಗಿದೆ.. ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ..
ಥೇಣಿ ಜಿಲ್ಲೆಯ ಗ್ರಾಮವೊಂದರ ದೇವಸ್ಥಾನದ ಆವರಣದಲ್ಲಿ ಹಲವಾರು ಮಕ್ಕಳು ಆಟವಾಡುತ್ತಿದ್ದರು.. ಈ ವೇಳೆ ಬಾಲಕಿಯೊಬ್ಬಳಿಗೆ ಸಿಹಿ ತಿಂಡಿ ನೀಡಿ ಒಳಗೆ ಕರೆದುಕೊಂಡು ಹೋಗಿದ್ದಾನೆ.. ಆಕೆಯ ಸಿಹಿ ತಿಂಡಿಯ ಆಸೆಗೆ ಅರ್ಚಕನ ಹಿಂದೆ ಹೋಗಿದ್ದಾಳೆ.. ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಅರ್ಚಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ..
ಬಾಲಕಿ ನಡೆದ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾಳೆ.. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ದೇವಸ್ಥಾನದ ಮುಂದೆ ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು.. ಅರ್ಚಕನ ಬಂಧನಕ್ಕೆ ಆಗ್ರಹಿಸಿದರು.. ಹೀಗಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ..

 

 

Share Post