Politics

ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಸ್ಪೀಕರ್‌ ಗರಂ:ಎಂಟಿಬಿಗೆ ತರಾಟೆ

ಬೆಳಗಾವಿ:   ಸ್ಥಳೀಯ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡ್ತಿಲ್ಲ, ಸಚಿವರಾಗಿ ನೀವು ಏನ್‌ ಮಾಡ್ತಿದ್ದೀರ ಎಂದು ಎಂಟಿಬಿಗೆ ಸ್ಪೀಕರ್‌ ತರಾಟೆ ತೆಗೆದುಕೊಂಡ್ರು. ಪುರಸಭೆ, ನಗರಸಭೆ, ಪಟ್ಟಣಪಂಚಾಯತ್‌ಗಳಲ್ಲಿ ಕಾಮಗಾರಿ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಬಾಕಿ ಉಳಿದಿರುವ ಕಾಮಗಾರಿಗಳ ಅಭಿವೃದ್ಧಿಗಾಗಿ ಹಣ ಬಿಡುಗಡೆಗೆ ನಾನು ಸರ್ಕಾರಕ್ಕೆ ಮನವಿ ಮಾಡ್ತೇವೆ ಆದಷ್ಟು ಬೇಗ ಕೆಲಸ ಪೂರ್ಣಗೊಳಿಸುತ್ತೇವೆ ಎಂದು ಸಮಾಜಾಯಿಷಿ ಕೊಟ್ಟಾಗ ನಾಗರಾಜ್‌ ವಿರುದ್ಧ ಸ್ಪೀಕರ್‌ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ರು.ಕೆಳ ಹಂತದಲ್ಲಿ ನಡೆಯುತ್ತಿರುವ ಅಕ್ರಮಗಳ ಕಡೆಗೆ ಸಚಿವರಾಗಿ ನೀವು ಗಮನ ಹರಿಸದಿದ್ರೆ ಹೇಗೆ? ಯಾವುದೇ ಒಂದು ಫೈಲ್‌ ಮೂವ್‌ ಆಗಬೇಕಂದ್ರೆ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿದೆ. ನಿಮ್ಮ ಅಧಿಕಾರಿಗಳು ಏನ್‌ ಮಾಡ್ತಿದ್ದಾರೆ ಅಂತ ಗಮನ ಹರಿಸಬೇಕಲ್ವಾ? ಕೆಲಸದ ಬದಲಾವಣೆ ಫೈಲ್‌ ಮೂವ್‌ ಮಾಡೋದಕ್ಕೆ ಎಷ್ಟು ಸಮಯ ಬೇಕು. ನಮ್ಮ ಅಧಿಕಾರಿಗಳು ಎಷ್ಟು ಸಲ ಬೆಂಗಳೂರಿಗೆ ಬಂದು ಹೋಗಬೇಕು? ಇದೆಲ್ಲ ನಿಮ್ಮ ಗಮನಕ್ಕೆ ಬಂದಿದ್ಯಾ. ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತವಿಲ್ಲದಂತೆ ಆಗಿದೆ. ಜನ ಕಷ್ಟ ಪಡುತ್ತಿರುವ ವಿಚಾರ ನಿಮ್ಮ ಗಮನಕ್ಕೆ ಬಂದಿದ್ಯಾ ಇಲ್ವಾ ಎಂದು ಗರಂ ಆದ್ರು.

Share Post